alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಬ್ ಬಚ್ಚನ್ ಅಚಾನಕ್ ಶೂಟಿಂಗ್ ಬಿಟ್ಟು ಬರಲು ಕಾರಣವೇನು ಗೊತ್ತಾ?

ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಬಲ್ಗೇರಿಯಾದಲ್ಲಿ ನಡೆಯುತ್ತಿದೆ. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯಿಸ್ತಿರುವ  ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ರಾತ್ರಿ-ಹಗಲು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಅಮಿತಾಬ್ ಬಚ್ಚನ್ ಶೂಟಿಂಗ್ ಬಿಟ್ಟು ಭಾರತಕ್ಕೆ ವಾಪಸ್ ಆಗಿದ್ದಾರೆ.

ಅಮಿತಾಬ್ ಬಚ್ಚನ್ ಮಗಳು ಶ್ವೇತಾರ ಮಾವ ರಾಜನ್ ನಂದಾ ಇಹಲೋಕ ತ್ಯಜಿಸಿದ್ದಾರೆ. ಗುರ್ಗಾಂವ್ ಆಸ್ಪತ್ರೆಯಲ್ಲಿ ರಾಜನ್ ನಂದಾ ಕೊನೆಯುಸಿರೆಳೆದಿದ್ದಾರೆ. ಅವ್ರ ಅಂತಿಮ ದರ್ಶನ ಪಡೆಯಲು ಅಮಿತಾಬ್ ಬಚ್ಚನ್ ಭಾರತಕ್ಕೆ ವಾಪಸ್ ಆಗಿದ್ದಾರೆ. ಈ ವಿಚಾರವನ್ನು ಅಮಿತಾಬ್ ಬಚ್ಚನ್ ಟ್ವೀಟರ್ ಮೂಲಕ ಹೇಳಿದ್ದಾರೆ.

ಇನ್ನು ರಿಷಿಕಪೂರ್ ಮಗಳು ಹಾಗೂ ರಣಬೀರ್ ಕಪೂರ್ ಸಹೋದರಿ ರಿದ್ದಿಮಾ ಕಪೂರ್ ಕೂಡ ಇನ್ಸ್ಟ್ರಾಗ್ರಾಮ್ ನಲ್ಲಿ ರಾಜನ್ ನಂದಾ ಫೋಟೋ ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತೇವೆಂದು ರಿದ್ಧಿಮಾ ಬರೆದುಕೊಂಡಿದ್ದಾರೆ. ರಾಜನ್ ನಂದಾ ಎಸ್ಕಾರ್ಟ್ಸ್ ಗ್ರೂಪ್ ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡ್ತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...