alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣುಮಕ್ಕಳೇ ಬೆಸ್ಟ್ ಎನ್ನುತ್ತಿದ್ದಾರೆ ಬಿಗ್ ಬಿ, ಕಾರಣ…?

ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತವರ ಪುತ್ರಿ ಶ್ವೇತಾರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿವೆ. ಹೆಣ್ಣುಮಕ್ಕಳೇ ಬೆಸ್ಟ್ ಅಂತಾ ಕ್ಯಾಪ್ಷನ್ ಕೊಟ್ಟು ಬಿಗ್ ಬಿ ಫೋಟೋ ಅಪ್ಲೋಡ್ ಮಾಡಿದ್ದಾರೆ.

ಭಾನುವಾರ ತಮ್ಮ ನಿವಾಸ ಜಲ್ಸಾ ಬಳಿ ಅಮಿತಾಭ್, ಅಭಿಮಾನಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತೆಗೆದ ಫೋಟೋಗಳಿವು. ಕೇವಲ ಮೂರು ಗಂಟೆಗಳಲ್ಲೇ ಈ ಫೋಟೋಗೆ 1200ಕ್ಕೂ ಹೆಚ್ಚು ಲೈಕ್ಸ್, ಕಮೆಂಟ್ಸ್ ಬಂದಿವೆ.

ಕೆಲ ದಿನಗಳ ಹಿಂದೆ ಕೂಡ ಬಿಗ್ ಬಿ ಮಗಳು ಶ್ವೇತಾಳ ಜೊತೆಗಿನ ಫೋಟೋ ಶೇರ್ ಮಾಡಿದ್ದರು.  ಭಾನುವಾರ ಹಿತೈಷಿಗಳ ಹಾರೈಕೆಯ ಜೊತೆಗೆ ಮಗಳ ನಗು ಖುಷಿ ಕೊಟ್ಟಿದೆ ಅಂತಾ ಬರೆದುಕೊಂಡಿದ್ದರು.

Sunday well wishers .. and the best wave and smile for the daughter SHWETA ..

A post shared by Amitabh Bachchan (@amitabhbachchan) on

ಇನ್ನು ಹೊಸ ವರ್ಷದಂದು ಮೊಮ್ಮಕ್ಕಳಾದ ನವ್ಯಾ ನವೇಲಿ ನಂದಾ ಹಾಗೂ ಆರಾಧ್ಯ ಬಚ್ಚನ್ ಫೋಟೋವನ್ನು ಬಿಗ್ ಬಿ ಇನ್ ಸ್ಟಾಗ್ರಾಮ್ನಲ್ಲಿ ಹಾಕಿದ್ದರು.

Daughters be the best … grand daughters the bestest .. Navya Naveli and Aaradhya ..

A post shared by Amitabh Bachchan (@amitabhbachchan) on

ಆರಾಧ್ಯಳ ಟಿಯಾರಾ ಹೇರ್ ಬ್ಯಾಂಡ್ ತೊಟ್ಟು ಮಗುವಾಗಿದ್ದರು ಬಿಗ್ ಬಿ. ಅಜ್ಜನನ್ನು ನೋಡಿ ಖುಷಿಯಿಂದ ಕೂಗುತ್ತಿರುವ ಮೊಮ್ಮಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಸದ್ಯ ಅಮಿತಾಭ್ 102 ನಾಟೌಟ್ ಚಿತ್ರದ ರಿಲೀಸ್ ಗಾಗಿ ಕಾಯುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...