alex Certify
ಕನ್ನಡ ದುನಿಯಾ       Mobile App
       

Kannada Duniya

ಕುಸ್ತಿ ಪಟ್ಟು ಕಲಿಯಲು ಅಮೀರ್ ಖಾನ್ ವರ್ಕೌಟ್

sushil-kumar-meets-aamir-khan-gives-fitness-tips-for-dangal-1

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಯಾವುದೇ ಸಿನಿಮಾಗಳನ್ನು ಮಾಡುವ ಮೊದಲು ಪೂರ್ವತಯಾರಿ ನಡೆಸುತ್ತಾರೆ. ಅದರಲ್ಲಿಯೂ ನೈಜಘಟನೆ ಆಧಾರಿತ ಕತೆಗಳನ್ನು ಸಿನಿಮಾ ಮಾಡುವಾಗ ಮುತುವರ್ಜಿ ವಹಿಸಿ ಪಾತ್ರದ ಬಗ್ಗೆ ಆಳವಾದ ಜ್ಞಾನ ಪಡೆದುಕೊಳ್ಳುತ್ತಾರೆ.

ಇದೀಗ ಕುಸ್ತಿ ಪಟುವೊಬ್ಬರ ಜೀವನಾಧಾರಿತ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಅಮೀರ್ ಖಾನ್ ಕುಸ್ತಿಯ ಪಟ್ಟುಗಳನ್ನು ಕಲಿಯತೊಡಗಿದ್ದಾರೆ. ಅಮೀರ್ ಖಾನ್ ಅವರ ಹೊಸ ಚಿತ್ರ ‘ದಂಗಾಲ್’ನಲ್ಲಿ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕಾಗಿ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರಾಗಿರುವ ಸುಶೀಲ್ ಕುಮಾರ್ ಅವರಿಂದ ಕುಸ್ತಿಯ ಒಳಹೊರಗನ್ನು ತಿಳಿದುಕೊಳ್ಳುತ್ತಿದ್ದಾರೆ. ಈಗಾಗಲೇ ಹರಿಯಾಣದಲ್ಲಿ ಸುಮಾರಷ್ಟು ಚಿತ್ರೀಕರಣ ನಡೆದಿದ್ದು, ಅಮೀರ್ ಖಾನ್ ದೇಹವನ್ನು ಸಾಕಷ್ಟು ದಂಡಿಸಿದ್ದಾರೆ.

ಕುಸ್ತಿಪಟು ಜೀವನಾಧಾರಿತ ಚಿತ್ರವಾಗಿರುವುದರಿಂದ ನೈಜವಾಗಿ ಮೂಡಿಬರಬೇಕೆಂಬ ಕಾಳಜಿ ಚಿತ್ರ ತಂಡದಾಗಿದ್ದು, ಹಾಗಾಗಿಯೇ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಅವರಿಂದ ಅಮೀರ್ ಖಾನ್ ಅವರಿಗೆ ತರಬೇತಿ ಕೊಡಿಸಲಾಗುತ್ತಿದೆ. ಅಮೀರ್ ಕೂಡ ಸಲಹೆಗಳನ್ನು ಪಡೆದು ವರ್ಕೌಟ್ ಮಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...