alex Certify
ಕನ್ನಡ ದುನಿಯಾ       Mobile App
       

Kannada Duniya

‘ರಾಜಕಾರಣದಿಂದ ದೂರಾಗಿ ಆರಾಮವಾಗಿದ್ದೇನೆ’: ಅಂಬಿ

ನಾನು ನ್ಯಾಯ ನೀತಿಗೆ ಪ್ರಾಣ ಕೊಡುವವನು. ರಾಜಕಾರಣ ಇಂದು ಪವಿತ್ರವಾಗಿ ಉಳಿದಿರುವ ಬಗ್ಗೆ ನನಗೆ ನಂಬಿಕೆ ಇಲ್ಲ, ರಾಜಕಾರಣದಿಂದ ಸ್ವಲ್ಪ ದೂರವಾಗಿ ಈಗ ಆರಾಮವಾಗಿದ್ದೇನೆ ಎಂದು ರೆಬಲ್ ಸ್ಟಾರ್ ಅಂಬರೀಷ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತ, ನಾನು ರಾಜಕೀಯ ಬಿಟ್ಟರೂ, ರಾಜಕೀಯ ನನ್ನನ್ನು ಬಿಡುತ್ತಿಲ್ಲ. ನಾನು ರಾಜಕೀಯದ ಗೋಜಲಿನಿಂದ ಸ್ವಲ್ಪ ದೂರ ಉಳಿಯಲು ನಿರ್ಧರಿಸಿದ್ದೇನೆ. ಆದರೂ ರಾಜಕಾರಣಿಗಳು ನನ್ನ ನೆಮ್ಮದಿ ಬಯಸುವಂತೆ ಕಾಣುತ್ತಿಲ್ಲ ಎಂದಿದ್ದಾರೆ.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಯಾವುದೇ ಕಾರಣಕ್ಕೂ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮಂಡ್ಯ ನನ್ನ ಕರ್ಮಭೂಮಿ, ಹೀಗಿರುವಾಗ ನಾನ್ಯಾಕೆ ರಾಮನಗರಕ್ಕೆ ಹೋಗಲಿ ಎಂದು ಮರು ಪ್ರಶ್ನೆ ಹಾಕಿದರು.

ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಹಿಂದೆ ನಾನಿಲ್ಲ ಎಂದು ಸ್ಪಷ್ಟಪಡಿಸಿದ ಅಂಬಿ, ಮುಂಬರುವ ಲೋಕಸಭಾ ಚುನಾವಣೆಗೂ ನಾನು ಸ್ಪರ್ಧಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...