alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಸಿನಿಮಾಗಳಲ್ಲಿ ನಟಿಸಿದ್ದರೂ ಒಟ್ಟಿಗೆ ಕಾಣಿಸಿಕೊಂಡಿಲ್ಲ ಈ ನಟಿಯರು

‘ಅಂಬಿ ನಿಂಗೆ ವಯಸ್ಸಾಯ್ತೊ’ ಸಿನಿಮಾದಲ್ಲಿ ನಟಿಸಿರುವ ಶೃತಿ ಹರಿಹರನ್ ಸಿನಿಮಾ ಬಗ್ಗೆ ಮಾತನಾಡಿದ್ದು, ಸುಹಾಸಿನಿ ಅವರೊಂದಿಗೆ ನಾಲ್ಕನೇ ಸಿನಿಮಾ ಮಾಡುತ್ತಿದ್ದರೂ ಇದುವರೆಗೆ ಒಟ್ಟಿಗೆ ಕಾಣಿಸಿಕೊಳ್ಳಲು ಆಗಿಲ್ಲ ಎಂದಿದ್ದಾರೆ.

ಸಿನಿಮಾ ಬಗ್ಗೆ ಮಾತನಾಡಿರುವ ಅವರು, ಸಿನಿಮಾದಲ್ಲಿ ನನ್ನ ಪಾತ್ರ 1980 ರ ಕಾಲಘಟ್ಟದಲ್ಲಿ ಬರುತ್ತದೆ. ಅಂಬಿ ಪಾತ್ರ ನಿರ್ವಹಿಸಿರುವ ಸುದೀಪ್ ತಂಗಿಯಾಗಿ ನಟಿಸಿದ್ದೇನೆ. ಅನೇಕರು‌ ನನ್ನನ್ನು‌ ಸುಹಾಸಿನಿ ‌ಮೇಡಂ ರೀತಿ ಇದ್ದೀಯಾ ಎಂದಿದ್ದಾರೆ ಎಂದು ಹೇಳಿದ್ದಾರೆ.

ಆ ಕಾಲದಲ್ಲಿದ್ದ ಮುಗ್ಧ ಹಾಗೂ ಶುದ್ಧ ಪ್ರೇಮದ ಬಗ್ಗೆ ಕಥೆಯಿದ್ದು, ಬೋಲ್ಡ್ ಹುಡುಗಿಯಾಗಿ ಸಮಾಜದ ಕಟ್ಟಲೆಗಳನ್ನು ಮೀರುವ ಪಾತ್ರವಾಗಿದೆ.

ಸುದೀಪ್ ಅವರನ್ನು ಕೇವಲ ನಟನಾಗಿ ಮಾತ್ರವಲ್ಲದೇ, ಕೆಲವೆಡೆ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಿದ್ದನ್ನು ನೋಡಿದ್ದೇನೆ.

ಇನ್ನು ಸುಹಾಸಿನಿ ಮೇಡಂ ಅವರೊಂದಿಗೆ ಇದು ನಾಲ್ಕನೇ ಚಿತ್ರವಾಗಿದ್ದರೂ ಒಮ್ಮೆಯೂ ಅವರೊಂದಿಗೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಮುಂದಿನ ದಿನದಲ್ಲಿ ಇದು ಸಾಧ್ಯವಾಗಬಹುದು ಎಂದು‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...