alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಿ ಅಭಿಮಾನಿಗಳಿಗೆ ಸಿಕ್ಕಿದೆ ಯುಗಾದಿ ಗಿಫ್ಟ್

ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

ಬಹುದಿನಗಳ ಬಳಿಕ ಅಂಬರೀಶ್ ಪೂರ್ಣ ಪ್ರಮಾಣದಲ್ಲಿ ನಾಯಕರಾಗಿ ಅಭಿನಯಿಸುತ್ತಿದ್ದು, ಕಿಚ್ಚ ಸುದೀಪ್, ಜಾಕ್ ಮಂಜು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗುರುದತ್ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ಅಂಬರೀಶ್ ಧ್ವನಿ ಒಳಗೊಂಡ ಟೀಸರ್ ಗಮನ ಸೆಳೆದಿತ್ತು. ಈಗ ಯುಗಾದಿ ಪ್ರಯುಕ್ತ ಬಿಡುಗಡೆ ಮಾಡಲಾಗಿರುವ ಟೀಸರ್ ಕೂಡ ಭರ್ಜರಿಯಾಗಿದೆ. ರಾಜ್ ಕುಮಾರ್, ರಜನಿಕಾಂತ್, ಚಿರಂಜೀವಿ ಮೊದಲಾದವರೊಂದಿಗೆ ಅಂಬರೀಶ್ ಇರುವ ಫೋಟೋಗಳು, ಅಂಬರೀಶ್ ಅವರ ನೋಟ ಗಮನಸೆಳೆಯುವಂತಿದೆ. ಬಿಡುಗಡೆಯಾಗಿರುವ ಟೀಸರ್ ಅಭಿಮಾನಿಗಳು ಮಾತ್ರವಲ್ಲ, ಸಿನಿ ರಸಿಕರಲ್ಲಿ ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...