alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಿ ಪುತ್ರನ ಚಿತ್ರಕ್ಕೆ ಟೈಟಲ್ ಫಿಕ್ಸ್

ರೆಬಲ್ ಸ್ಟಾರ್ ಅಂಬರೀಶ್–ಸುಮಲತಾ ದಂಪತಿ ಪುತ್ರ ಅಭಿಷೇಕ್ ಗೌಡ ಮೊದಲ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ ‘ಅಮರ್’ ಟೈಟಲ್ ಫೈನಲ್ ಮಾಡಲಾಗಿದೆ.

ಅಭಿಷೇಕ್ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ. ಇದನ್ನು ಸುಮಲತಾ ಅಂಬರೀಶ್ ಕಳೆದ ವರ್ಷವೇ ಖಚಿತಪಡಿಸಿದ್ದರು.

ಈಗ ಅಭಿಷೇಕ್ ಚಿತ್ರರಂಗಕ್ಕೆ ಬರಲು ವೇದಿಕೆ ರೆಡಿಯಾಗಿದೆ. ನಾಗಶೇಖರ್ ಲವ್, ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಒಳಗೊಂಡ ವಿಶೇಷ ಕತೆಯನ್ನು ರೆಡಿ ಮಾಡಿದ್ದಾರೆ. ಅಂಬರೀಶ್ ಸದ್ಯ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಪುತ್ರನ ಚಿತ್ರದ ಬಗ್ಗೆಯೂ ತಯಾರಿ ನಡೆದಿದೆ.

ನಾಗಶೇಖರ್ ನಿರ್ದೇಶನದಲ್ಲಿ ಅಭಿಷೇಕ್ ಗೌಡ ಅಭಿನಯದ ಮೊದಲ ಚಿತ್ರ ‘ಅಮರ್’ ಮೂಡಿಬರಲಿದ್ದು ಶೀಘ್ರವೇ ಸೆಟ್ಟೇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...