alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಿಗೆ ನಿಜವಾಗ್ಲೂ ವಯಸ್ಸೇ ಆಗಿಲ್ಲ…! ಏಕೆ ಗೊತ್ತಾ…?

ರೆಬೆಲ್ ಸ್ಟಾರ್ ಅಂಬರೀಷ್ ಹಲವು ವರ್ಷಗಳ ನಂತರ ನಾಯಕನಾಗಿ ಬಣ್ಣ ಹಚ್ಚಿರುವ ಚಿತ್ರ ‘ಅಂಬಿ ನಿಂಗೆ ವಯಸ್ಸಾಯ್ತೋ’. ಈ ಚಿತ್ರ ಹಲವು ಕಾರಣಗಳಿಂದ ಸಖತ್ತಾಗೇ ಸುದ್ದಿಯಾಗ್ತಿದೆ. ಚಿತ್ರದಲ್ಲಿ ಅಂಬಿ ಎನರ್ಜಿ ನೋಡಿ ನಿರ್ದೇಶಕ ಗುರುದತ್ ಸ್ಟನ್ ಆಗಿಬಿಟ್ಟಿದ್ದರಂತೆ. ಅದರಲ್ಲೂ ಆಕ್ಷನ್ ಸನ್ನಿವೇಶಗಳಲ್ಲಿ ಅಂಬಿ ಪರ್ಫಾಮೆನ್ಸ್ ನೋಡಿ ನಿರ್ದೇಶಕ ಗುರು ಸಖತ್ ಥ್ರಿಲ್ ಆಗಿಬಿಟ್ಟಿದ್ದಾರಂತೆ.

ಎಲ್ಲಾ ಆಕ್ಷನ್ ಸನ್ನಿವೇಶಗಳಲ್ಲೂ ಅಂಬಿ ಡ್ಯೂಪ್ ಇಲ್ಲದೆ ನಟಿಸಿದ್ದಾರಂತೆ. ಅಲ್ಲದೇ ಹಲವು ಸಾಹಸ ದೃಶ್ಯಗಳನ್ನ ಅಂಬಿ ಸಿಂಗಲ್ ಟೇಕ್ನಲ್ಲೇ ಓಕೆ ಮಾಡಿದ್ದಾರಂತೆ. ಸಾಹಸ ದೃಶ್ಯಗಳಲ್ಲಿ ಅಂಬಿ, ಯುವ ನಟರು ನಾಚುವಂತೆ ನಟಿಸಿದ್ದಾರಂತೆ. ಚಿತ್ರದ ಒಂದು ದೃಶ್ಯವನ್ನ ಸಿಂಗಲ್ ಟೇಕ್ನಲ್ಲೇ ಚಿತ್ರಿಸೋಣ ಎಂದ ನಿರ್ದೇಶಕರ ಮಾತಿಗೆ ಓಕೆ ಎಂದ ರೆಬೆಲ್ ಸ್ಟಾರ್, ಒಂದೂವರೆ ನಿಮಿಷದ ಆಕ್ಷನ್ ಸೀನ್ ನಲ್ಲಿ ಅಷ್ಟೇ ಎನರ್ಜೆಟಿಕ್ ಆಗಿ ಅಭಿನಯಿಸಿದ್ದಾರಂತೆ.

ಆ ದೃಶ್ಯದ ಚಿತ್ರೀಕರಣದಲ್ಲಿ ನಾನು ಕಟ್ ಹೇಳೋದನ್ನೇ ಮರೆತುಬಿಟ್ಟಿದ್ದೆ. ಈ ವಯಸ್ಸಿನಲ್ಲೂ ರೆಬೆಲ್ ಸ್ಟಾರ್ ಇಷ್ಟು ಲವಲವಿಕೆಯಿಂದ ಇರೋದನ್ನ ನೋಡಿದ್ರೆ ಅಂಬಿ ನಿಂಗೆ ವಯಸ್ಸಾಯ್ತು ಅಂತ ಹೇಳೋಕೆ ಸಾಧ್ಯವೇ ಇಲ್ಲ ಅಂತಿದ್ದಾರೆ ನಿರ್ದೇಶಕರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...