alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನ ಮನೆಗೆ ಹೋಗದಿರುವ ಹಿಂದಿನ ‘ಕಾರಣ’ ಬಿಚ್ಚಿಟ್ಟ ಅಂಬರೀಶ್

ಸ್ಯಾಂಡಲ್ ವುಡ್ ನಟ ಅಂಬರೀಶ್ ತಮ್ಮ ಆತ್ಮೀಯ ನಡವಳಿಕೆಯಿಂದಲೇ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಾರೆ. ಅಂಬರೀಶ್ ಅವರ ಈ ನಡವಳಿಕೆಗೆ ಅಭಿಮಾನಿಗಳು ಮಾತ್ರವಲ್ಲ ಭಾರತೀಯ ಚಿತ್ರರಂಗದ ಖ್ಯಾತನಾಮರೂ ಫಿದಾ ಆಗಿದ್ದಾರೆ.

ಹೀಗಾಗಿ ನಟ ಅಂಬರೀಶ್ ಅವರಿಗೆ ದೇಶ-ವಿದೇಶಗಳಲ್ಲೂ ಆತ್ಮೀಯರಿದ್ದಾರೆ. ಚಿತ್ರರಂಗ ಮಾತ್ರವಲ್ಲದೆ ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸಿರುವ ಅಂಬರೀಶ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಮಂಡ್ಯ ಜಿಲ್ಲೆಯನ್ನು ತಮ್ಮ ರಾಜಕೀಯ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡಿರುವ ಅಂಬರೀಶ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಲಭಿಸಿದರೂ ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ. ಇಷ್ಟಾದರೂ ಅವರು ಮಂಡ್ಯ ಕ್ಷೇತ್ರದ ನಂಟನ್ನು ಬಿಟ್ಟುಕೊಟ್ಟಿಲ್ಲ.

ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ಹೊಸಹಳ್ಳಿ ಬೋರೇಗೌಡರ ನಿವಾಸಕ್ಕೆ ಅಂಬರೀಶ್ ಇಂದು ಭೇಟಿ ನೀಡಿದ್ದು, ಈ ವೇಳೆ ಅಭಿಮಾನಿಗಳು ಸಾವು ಸಂಭವಿಸಿದ ಸಂದರ್ಭದಲ್ಲೇಕೆ ಬರಲಿಲ್ಲವೆಂದು ಕೇಳಿದಾಗ ತಾವು ಸಾವಿನ ಮನೆಗೆ ಏಕೆ ಹೋಗುವುದಿಲ್ಲವೆಂಬ ಕಾರಣ ಬಿಚ್ಚಿಟ್ಟಿದ್ದಾರೆ.

ಸಾವಿನ ಮನೆಗೆ ತಾವು ಹೋದ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಅರಿಯದೇ ಅಭಿಮಾನಿಗಳು ನನ್ನನ್ನು ಕಂಡು ಸಂಭ್ರಮಾಚರಣೆ ಮಾಡುತ್ತಾರೆ. ಈ ಹಿಂದೆಯೂ ತಮಗೆ ಇಂತಹ ಅನುಭವವಾಗಿದ್ದು, ದುಃಖದಲ್ಲಿರುವ ಕುಟುಂಬದವರ ಸಮ್ಮುಖದಲ್ಲಿ ಇದು ನಡೆದರೆ ಅವಮಾನವಲ್ಲವೇ ಎಂದು ಪ್ರಶ್ನಿಸಿದ ಅಂಬರೀಷ್, ಹೀಗಾಗಿ ತಾವು ಸಾವಿನ ಮನೆಗೆ ಹೋಗಲು ಹಿಂದೇಟು ಹಾಕುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...