alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಪತ್ರೆಯಿಂದ ಆಂಬುಲನ್ಸ್ ನಲ್ಲೇ ಬಂದು ’ಅಂಬಿ ನಿಂಗ್ ವಯಸ್ಸಾಯ್ತ’ ಚಿತ್ರ ವೀಕ್ಷಿಸಿದ ರೆಬಲ್ ಸ್ಟಾರ್

ಬೆಂಗಳೂರು: ಅನಾರೋಗ್ಯದ ನಡುವೆಯೂ ರೆಬಲ್ ಸ್ಟಾರ್ ಅಂಬರೀಷ್ ತಾವು ನಟಿಸಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವನ್ನು ವೀಕ್ಷಿಸಿದ್ದಾರೆ.

ಹೌದು. ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿರುವ ನಟ ಅಂಬರೀಷ್, ಚಿಕಿತ್ಸೆಗಾಗಿ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ಚಿತ್ರವನ್ನು ನೋಡಲೇಬೇಕೆಂದು ಹಠ ಹಿಡಿದ ಅಂಬಿ, ಆಂಬುಲೆನ್ಸ್ ಮೂಲಕ ವೈದ್ಯರ ಜೊತೆಯೇ ಬಂದು ಚಿತ್ರದ ಸ್ಪೆಷಲ್ ಶೋ ವನ್ನು ವೀಕ್ಷಿಸಿ ವಾಪಸ್ ಆಗಿದ್ದಾರೆ.

ಹಲವು ವರ್ಷಗಳ ಬಳಿಕ ಅಂಬರೀಷ್, ‘ಅಂಬಿ ನಿಂಗ್ ವಯಸ್ಸಾಯ್ತ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ್ದಾರೆ. ಭಾನುವಾರ ಚಿತ್ರದ ಆಡಿಯೋ ರಿಲೀಸ್​ ಗೆ ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಅಂಬರೀಷ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಕಾರಣ ಆಡಿಯೋ ರಿಲೀಸ್ ರದ್ದಾಗಿತ್ತು.

ಆದರೆ ತಮ್ಮ ಚಿತ್ರ ಯಾವ ರೀತಿಯಾಗಿ ಮೂಡಿ ಬಂದಿದೆ ಎಂಬ ಕುತೂಹಲದಲ್ಲಿರುವ ಅಂಬಿ ಚಿತ್ರ ನೋಡಲು ಕಾತರರಾಗಿದ್ದು, ತಮ್ಮ ಅನಾರೋಗ್ಯದ ನಡುವೆಯೂ ಚಿತ್ರವನ್ನು ನೋಡಲೇಬೇಕೆಂಬ ಹಠ ಹಿಡಿದಿದ್ದಾರೆ. ಇದರಿಂದ ಅಂಬಿಗೆ ಚಿತ್ರ ತಂಡ, ಕಲಾವಿದರ ಸಂಘದಲ್ಲಿ ಸ್ಪೆಷಲ್ ಶೋ ಏರ್ಪಡಿಸಿತ್ತು. ಆಸ್ಪತ್ರೆಯಿಂದ ಆಂಬುಲೆನ್ಸ್ ನಲ್ಲಿಯೇ ಬಂದು ಚಿತ್ರ ವೀಕ್ಷಿಸಿದ ಅಂಬಿ ಈಗ ಫುಲ್ ಖುಷ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...