alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರಾನ್ಸ್ ಗೆಲುವಿಗೆ ಸಂಭ್ರಮಿಸಿದ ಭಾರತೀಯ ಸೆಲೆಬ್ರಿಟಿಗಳು

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಕೊನೆಗೂ ವಿದ್ಯುಕ್ತ ತೆರೆಬಿದ್ದಿದೆ. ಕ್ರೊವೇಷಿಯಾ ವಿರುದ್ಧ ಗೆದ್ದ ಫ್ರಾನ್ಸ್ 20 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದೆ. ಫ್ರಾನ್ಸ್ ನ ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಭಾರತೀಯ ಸೆಲೆಬ್ರಿಟಿಗಳು ಕೂಡ ಭಾಗಿಯಾಗಿದ್ದಾರೆ.

ಏಷ್ಯಾದ ನಂಬರ್ 1 ಸಿರಿವಂತ, ರಿಲಯನ್ಸ್ ಸಮೂಹ ಸಂಸ್ಥೆಗಳ ಮಾಲೀಕರಾದ ಮುಕೇಶ್ ಅಂಬಾನಿ ದಂಪತಿ ಫೈನಲ್ ಪಂದ್ಯದ ವೀಕ್ಷಣೆಗಾಗಿಯೇ ರಷ್ಯಾಗೆ ತೆರಳಿದ್ರು. ಮೈದಾನದಲ್ಲೇ ಫೈನಲ್ ಪಂದ್ಯವನ್ನು ವೀಕ್ಷಿಸಿದ ಅಂಬಾನಿ ದಂಪತಿ ಮೈದಾನದಲ್ಲಿ ಪಂದ್ಯ ಶುರುವಿಗೂ ಮೊದಲಿನ ಫೋಟೋ ಹಾಗು ಆನಂತರದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮುಕೇಶ್ ಅಂಬಾನಿ ದಂಪತಿಗೆ ಜಹೀರ್ ಖಾನ್ ದಂಪತಿ ಕೂಡ ಸಾಥ್ ನೀಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ಕೂಡ ಮನೆಯಲ್ಲಿ ಕುಳಿತು ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿರುವ ಫೋಟೋವನ್ನ ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಐಶ್ವರ್ಯ ರೈ ಬಚ್ಚನ್ ಮಗಳೊಂದಿಗೆ ಪಂದ್ಯ ವೀಕ್ಷಿಸಿದ ಖುಷಿಯ ಕ್ಷಣಗಳ ಫೋಟೋ ಕೂಡ ಆನ್ಲೈನ್ ಮಂದಿ ಇಷ್ಟಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...