alex Certify
ಕನ್ನಡ ದುನಿಯಾ       Mobile App
       

Kannada Duniya

ಸಖತ್ ಸೌಂಡ್ ಮಾಡ್ತಿದೆ ಅಲ್ಲು ಅರ್ಜುನ್ ‘DJ’ ಟ್ರೇಲರ್

dj-allu

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ದುವ್ವಾಡ ಜಗನ್ನಾಥಮ್’ ಟ್ರೇಲರ್ ಸೌಥ್ ಇಂಡಿಯಾದಲ್ಲಿ ಸಂಚಲನ ಮೂಡಿಸಿದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 14 ಲಕ್ಷ ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ. ಜೂನ್ 5 ರಂದು ಟ್ರೇಲರ್ ರಿಲೀಸ್ ಆಗಿದ್ದು, ಇದುವರೆಗೂ 51 ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ. ಟೀಸರ್ ನಲ್ಲಿ ಬ್ರಾಹ್ಮಣನಾಗಿ ಮಿಂಚಿದ್ದ ಅಲ್ಲು ಟ್ರೇಲರ್ ನಲ್ಲಿ ಡಿ.ಜೆ. ಆಗಿ ಕಾಣಿಸಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಅಭಿನಯದ 25 ನೇ ಚಿತ್ರ ಇದಾಗಿದ್ದು, ಅವರ ವೃತ್ತಿ ಬದುಕಿನ ಸ್ಪೆಷಲ್ ಸಿನಿಮಾ ಇದು ಎನ್ನಲಾಗ್ತಿದೆ. ದಿಲ್ ರಾಜ ನಿರ್ಮಾಣದಲ್ಲಿ ಹರಿಶಂಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದುವ್ವಾಡ ಜಗನ್ನಾಥಮ್’ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.

ಅಲ್ಲು ಅರ್ಜುನ್ ಭರ್ಜರಿ ಡೈಲಾಗ್, ಸ್ಟೆಪ್ಸ್ ಹಾಗೂ ಮೈನವಿರೇಳಿಸುವ ಸಾಹಸ ದೃಶ್ಯಗಳ ಮೂಲಕ ಟ್ರೇಲರ್ ನಲ್ಲಿ ಮೋಡಿ ಮಾಡಿದ್ದಾರೆ. ಕುತೂಹಲಕಾರಿಯಾಗಿರುವ ಟ್ರೇಲರ್ ‘ಬನ್ನಿ’ ಅಭಿಮಾನಿಗಳಿಗೆ ಸಂಭ್ರಮ ಮೂಡಿಸಿದೆ.

ಇದೇ ತಿಂಗಳಲ್ಲಿ ಚಿತ್ರ ತೆರೆ ಕಾಣಲಿದ್ದು, ಸಿನಿರಸಿಕರ ಕುತೂಹಲವನ್ನು ಹೆಚ್ಚಿಸಿದೆ. ಅಲ್ಲು ಅರ್ಜುನ್ ಜೊತೆಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...