alex Certify
ಕನ್ನಡ ದುನಿಯಾ       Mobile App
       

Kannada Duniya

ಬೋನಿ ಕಪೂರ್ ಹುಟ್ಟುಹಬ್ಬದಲ್ಲಿ ಬಹಿರಂಗವಾಯ್ತು ಸಹೋದರರ ಮುನಿಸು

ಇತ್ತೀಚೆಗಷ್ಟೆ ನಿರ್ಮಾಪಕ ಬೋನಿ ಕಪೂರ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆದ್ರೆ ಈ ಬರ್ತಡೇ ಪಾರ್ಟಿಯಲ್ಲಿ ಕಪೂರ್ ಬ್ರದರ್ಸ್ ಸುಳಿವೇ ಇರಲಿಲ್ಲ. ನಟ ಅನಿಲ್ ಕಪೂರ್ ಹಾಗೂ ಸಂಜಯ್ ಕಪೂರ್ ಇಬ್ಬರೂ ಪಾರ್ಟಿಗೆ ಗೈರಾಗಿದ್ದರು. ಹಾಗಾಗಿ ಬೋನಿ ಕಪೂರ್ ಹಾಗೂ ಅನಿಲ್, ಸಂಜಯ್ ಮಧ್ಯೆ ವಿರಸ ಮೂಡಿದೆಯಾ ಅನ್ನೋ ಅನುಮಾನ ಮೂಡಿದೆ.

ಅನಿಲ್ ಹಾಗೂ ಸಂಜಯ್ ಕಪೂರ್ ಮನೆಯಲ್ಲಿ ನಡೆದ ದೀಪಾವಳಿ ಹಬ್ಬದ ಪಾರ್ಟಿಗೂ ಬೋನಿ ಕಪೂರ್ ಬಂದಿರಲಿಲ್ಲ. ಆದ್ರೆ ಮಗ ಅರ್ಜುನ್ ಕಪೂರ್ ಮಾತ್ರ ಹಾಜರಾಗಿದ್ದರು. ಬೋನಿ ಕಪೂರ್ ಅವರ 63ನೇ ಹುಟ್ಟುಹಬ್ಬಕ್ಕೆ ಪತ್ನಿ ಶ್ರೀದೇವಿ ಭರ್ಜರಿ ಪಾರ್ಟಿಯನ್ನೇ ಆಯೋಜಿಸಿದ್ದರು.

ಮುಂಬೈ ಮಾತ್ರವಲ್ಲದೇ ಚೆನ್ನೈನಿಂದ್ಲೂ ಸ್ನೇಹಿತರ ದಂಡು ಪಾರ್ಟಿಗೆ ಬಂದಿತ್ತು. ಬೋನಿ ಕಪೂರ್ ಅವರ ಮೊದಲ ಪತ್ನಿ ಮೋನಾ ಮೃತಪಟ್ಟಾಗಿನಿಂದ್ಲೂ ಕಪೂರ್ ಬ್ರದರ್ಸ್ ನಡುವಣ ಸಂಬಂಧ ಹಳಸಿದೆ ಅಂತಾ ಹೇಳಲಾಗ್ತಿದೆ. ಅರ್ಜುನ್ ಕಪೂರ್ ಹಾಗೂ ಅಂಶುಲಾ ಕೂಡ ಬೋನಿ ಕಪೂರ್ ಅವರ ಎರಡನೇ ಸಂಸಾರದ ಜೊತೆಗೆ ನಂಟು ಹೊಂದಲು ನಿರಾಕರಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...