alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಆಲಿಯಾ ಭಟ್ ತಾಯಿ ಸೋನಿ ರಾಜ್ದಾನ್ ಗೆ ಶಾಕ್!

alia-bhatt-mother

ನಿನ್ನೆ ನಟಿ ಆಲಿಯಾ ಭಟ್ ತಾಯಿ ಸೋನಿ ರಾಜ್ದಾನ್ ಅವರಿಗೆ ಶಾಕ್ ಮೇಲೆ ಶಾಕ್. ಮಗಳು ಶಹೀನ್ ಜೊತೆಗೆ ಅವರು ಹೊರಹೋಗಿದ್ರು. ಆಗ ಫೋನ್ ಗೆ ಮೆಸೇಜ್ ಗಳ ಮೇಲೆ ಮೆಸೇಜ್ ಬಂದಿದೆ.

ಕ್ರೆಡಿಟ್ ಕಾರ್ಡ್ ಮೂಲಕ 19 ವಹಿವಾಟು ನಡೆಸಿರುವುದಾಗಿ ಬಂದಿದ್ದ ಸಂದೇಶ ಅದು. ಅಸಲಿಗೆ ಸೋನಿ ರಾಜ್ದಾನ್ ಕ್ರೆಡಿಟ್ ಕಾರ್ಡ್ ಬಳಸಿಯೇ ಇರಲಿಲ್ಲ. ಅವರ ಕ್ರೆಡಿಟ್ ಕಾರ್ಡ್ ಮನೆಯಲ್ಲಿ ಲಾಕರ್ ನಲ್ಲಿ ಭದ್ರವಾಗಿತ್ತು. ಆದ್ರೆ ಯಾರೋ ಕಿಡಿಗೇಡಿಗಳು ಅದ್ಹೇಗೋ ಹ್ಯಾಕ್ ಮಾಡಿ ಅವರ ಕ್ರೆಡಿಟ್ ಕಾರ್ಡ್ ಮೂಲಕ ಪರ್ಚೇಸ್ ಮಾಡಿಬಿಟ್ಟಿದ್ದಾರೆ.

ಇದ್ರಿಂದ ಗಾಬರಿಯಾದ ಸೋನಿ ಕೂಡಲೇ ಬ್ಯಾಂಕ್ ಗೆ ಮಾಹಿತಿ ನೀಡಿದ್ರು. ಬ್ಯಾಂಕ್ ನವರು ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿದ್ದಾರಂತೆ. ವಂಚಕರು ಮಾಡಿರೋ ಶಾಪಿಂಗ್ ಗೆ ಹಣಕಟ್ಟಬೇಕಾಗಿಲ್ಲ ಅಂತಾನೂ ತಿಳಿಸಿದ್ದಾರಂತೆ. ಅಕಸ್ಮಾತ್ ತಾವೇನಾದ್ರೂಮೆಸೇಜ್ ಗಳನ್ನು ಗಮನಿಸದೇ ಹೋಗಿದ್ರೆ ನಾನು ಪಾಪರ್ ಆಗಿಬಿಡ್ತಿದ್ದೆ ಎನ್ನುತ್ತಾರೆ ಸೋನಿ ರಾಜ್ದಾನ್. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅವರು ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...