alex Certify
ಕನ್ನಡ ದುನಿಯಾ       Mobile App
       

Kannada Duniya

30 ವರ್ಷದೊಳಗೆ ಮದುವೆಯಾಗ್ತಾಳಂತೆ ನಟಿ…!

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಅನೇಕ ದಿನಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಆಲಿಯಾ ಈಗ ರಣಬೀರ್ ಜೊತೆಗಿನ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ. ಅಷ್ಟೇ ಅಲ್ಲ ಮದುವೆ ಬಗ್ಗೆ ಹಿಂಟ್ ನೀಡಿದ್ದಾಳೆ.

ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಆಲಿಯಾ, ಸಾರಿ ನಾನು ಸಿಂಗಲ್ ಅಲ್ಲ ಎಂದಿದ್ದಾಳೆ. 30 ವರ್ಷದೊಳಗೆ ಮದುವೆಯಾಗಿ ಸರ್ಪ್ರೈಸ್ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಆಲಿಯಾ ಹೇಳಿದ್ದಾಳೆ. ಲಿವ್ ಇನ್ ರಿಲೇಷನ್ ಮೇಲೆ ನಂಬಿಕೆಯಿಲ್ಲ ಎಂದ ಆಲಿಯಾ, ಬಾಯ್ ಫ್ರೆಂಡ್ ಜೊತೆ ಮದುವೆಯಾಗ್ತೇನೆ ಎಂದಿದ್ದಾಳೆ.

ವದಂತಿಗಳಿಗೆ ಕಿವಿಕೊಡುವುದಿಲ್ಲ. ವದಂತಿ ವದಂತಿಯಾಗಿದ್ದು, ಅದಕ್ಕೆ ಉತ್ತರ ನೀಡುವ ಅಗತ್ಯವಿರುವುದಿಲ್ಲವೆಂದು ಆಲಿಯಾ ಹೇಳಿದ್ದಾಳೆ. ಸದ್ಯ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಣಬೀರ್ ಜೊತೆ ಆಲಿಯಾ ನಟಿಸುತ್ತಿದ್ದಾಳೆ. ಚಿತ್ರದ ಮೂಲಕವೇ ಇಬ್ಬರೂ ಮತ್ತಷ್ಟು ಹತ್ತಿರವಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...