alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಯಾಷನ್ ಶೋನಲ್ಲಿ ಮೋಡಿ ಮಾಡಿದ ಹೊಸ ಜೋಡಿ

fashion-ind-malhotra_381ffb7a-7597-11e7-b40f-35ec362abc1c

ಬಾಲಿವುಡ್ ನ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರ ಫ್ಯಾಷನ್ ಶೋ ಒಂದರಲ್ಲಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ಸಿನೆಮಾದಲ್ಲಿ ಇದುವರೆಗೂ ಅವರು ಜೊತೆಯಾಗಿ ನಟಿಸಿರಲಿಲ್ಲ.

ಆದ್ರೀಗ ಜೋಯಾ ಅಖ್ತರ್ ಅವರ ‘ಗಲ್ಲಿ ಬಾಯ್ಸ್’ ಚಿತ್ರದಲ್ಲಿ ರಣವೀರ್ ಸಿಂಗ್ ಗೆ ಆಲಿಯಾ ನಾಯಕಿ. ಗಲ್ಲಿ ಬಾಯ್ಸ್ ಸಿನೆಮಾ ಬಿಡುಗಡೆಗೂ ಮುನ್ನವೇ ಆಲಿಯಾ ಹಾಗೂ ರಣವೀರ್ ಸಿಂಗ್ ರನ್ನು ಜೊತೆಯಾಗಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.

ಇಬ್ಬರದ್ದೂ ಅದ್ಭುತ ಜೋಡಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಫ್ಯಾಷನ್ ಶೋನಲ್ಲಿ ಆಲಿಯಾ ರಾಜಕುಮಾರಿಯಂತೆ ಕಂಗೊಳಿಸಿದ್ದಾಳೆ. ರಣವೀರ್ ಸಿಂಗ್ ಕೂಡ ಕಮ್ಮಿಯಿರಲಿಲ್ಲ. ಉದ್ದನೆಯ ಕೂದಲು, ಗಡ್ಡದ ಜೊತೆಗೆ ಶೇರ್ವಾನಿ ಲುಕ್ ಡಿಫರೆಂಟ್ ಆಗಿತ್ತು.

ranveer-alia-full

ಆಲಿಯಾ ಹಾಗೂ ರಣವೀರ್ ಅಲ್ಲಿ ಶೋ ಸ್ಟಾಪರ್ ಗಳಾಗಿದ್ರು. ರಣವೀರ್ ಸದ್ಯ ಪದ್ಮಾವತಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆಲಿಯಾ ಕೂಡ ಮೇಘನಾ ಗುಲ್ಜಾರ್ ನಿರ್ದೇಶನದ ‘ರಾಜಿ’ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ತಿದ್ದಾಳೆ. ಅತಿ ಶೀಘ್ರದಲ್ಲೇ ಗಲ್ಲಿ ಬಾಯ್ಸ್ ಚಿತ್ರೀಕರಣ ಕೂಡ ಆರಂಭವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...