alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಮನೆಗೆ ಶಿಫ್ಟಾದ ಆಲಿಯಾ ಭಟ್ ಮೊದಲು ಮಾಡಿದ್ಲು ಈ ಕೆಲ್ಸ

alia

‘ಕಪೂರ್ & ಸನ್ಸ್’, ‘ಉಡ್ತಾ ಪಂಜಾಬ್’, ‘ಡಿಯರ್ ಜಿಂದಗಿ’ ಹೀಗೆ ಈ ವರ್ಷ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ನಟಿಸಿರೋ ನಟಿ ಆಲಿಯಾ ಭಟ್ ಹೊಸ ಮನೆಗೆ ಶಿಫ್ಟಾಗಿದ್ದಾರೆ.

ಕಳೆದ ಜೂನ್ ನಲ್ಲಿ ತಮ್ಮ ಬರ್ತಡೇ ದಿನವೇ ಹೊಸ ಮನೆಗೆ ಪ್ರವೇಶ ಮಾಡಲು ಆಲಿಯಾ ಉತ್ಸುಕರಾಗಿದ್ರು, ಆದ್ರೆ ಮನೆ ಇನ್ನೂ ಪೂರ್ತಿ ರೆಡಿಯಾಗಿರಲಿಲ್ಲ. ಹೊಸ ಮನೆ ಆಲಿಯಾ ಪೋಷಕರ ನಿವಾಸದಿಂದ ಹೆಚ್ಚು ದೂರವೇನಿಲ್ಲ. ನಿನ್ನೆ ಆಲಿಯಾ ಮತ್ತವರ ಸಹೋದರಿ ಶಹೀನ್ ಹೊಸ ಮನೆಗೆ ಬಂದಿದ್ದಾರೆ.

ಈ ಮನೆಯನ್ನು ನಿರ್ಮಾಪಕ ವಿಕಾಸ್ ಬಹ್ಲ್ ಅವರ ಪತ್ನಿ ರಿಚಾ ವಿನ್ಯಾಸಗೊಳಿಸಿದ್ದಾರೆ. 3 ಬೆಡ್ ರೂಂನ ಈ ಅಪಾರ್ಟ್ ಮೆಂಟ್ ಥೇಟ್ ನ್ಯೂಯಾರ್ಕ್ ನ ಸುಂದರ ಮನೆಗಳಂತಿದೆ. ಹೊಸ ಮನೆಗೆ ಬರ್ತಿದ್ದಂತೆ ಅಲ್ಲೊಂದು ಫೋಟೋ ಶೂಟ್ ಮಾಡಿಸ್ಕೊಂಡು ಆಲಿಯಾ ಭಟ್ ಅದನ್ನೆಲ್ಲ ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಅಸಲಿಗೆ ತಂದೆ ಮಹೇಶ್ ಭಟ್ ಗೆ ಆಲಿಯಾ ಬೇರೆ ಮನೆಗೆ ಹೋಗೋದು ಇಷ್ಟವಿರಲಿಲ್ಲ. ಇಲ್ಲೇ ಇಷ್ಟು ಪ್ರೈವೆಸಿ ಇರುವಾಗ ಬೇರೆ ಮನೆ ಯಾಕೆ ಅನ್ನೋದು ಅವರ ಪ್ರಶ್ನೆ. ಆದ್ರೆ ಆರಾಮಾಗಿ ಇಷ್ಟಬಂದಂತೆ ಇರಲು ಬಯಸ್ತಾ ಇರೋ ಆಲಿಯಾ, ಅಪ್ಪನ ಮಾತು ಕೇಳದೆ ಸಹೋದರಿ ಜೊತೆ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...