alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರೀಯ ಕ್ರೀಡೆಯ ಬಗ್ಗೆ ಹೀಗೆಂದರು ಅಕ್ಷಯ್ ಕುಮಾರ್

ಬಾಲಿವುಡ್ ನ ನಟ ಅಕ್ಷಯ್ ಕುಮಾರ್ ಹೌಸ್ಫುಲ್4 ಸಿನಿಮಾದ ಚಿತ್ರೀಕರಣಕ್ಕಾಗಿ ಕ್ವೀನ್ಸ್ಗೆ ತೆರಳಿದ್ದಾರೆ. ಎರಡು ದಿನಗಳ ಮಟ್ಟಿಗೆ ಮುಂಬೈಗೆ ಬಂದಿದ್ದ ಅಕ್ಕಿ ಗೋಲ್ಡ್ ಸಿನಿಮಾದ ಮ್ಯೂಸಿಕ್ ಆಲ್ಬಮ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರೀಮಾ ಕಾಟ್ಕಿ ನಿರ್ದೇಶನದ ಗೋಲ್ಡ್ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಸ್ವಾತಂತ್ರ್ಯದ ನಂತರದಲ್ಲಿ ಭಾರತೀಯ ಹಾಕಿ ತಂಡ 1984ರ ವಿಶ್ವಕಪ್ನಲ್ಲಿ ಚಿನ್ನ ಗೆಲ್ಲುವ ರಿಯಲ್ ಇನ್ಸಿಡೆಂಟ್ ಬೇಸ್ಡ್ ಸಿನಿಮಾ ಗೋಲ್ಡ್.

ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ್ ಸಿನಿಮಾಗೆ ಸಿಗುತ್ತಿರೋ ಮಹತ್ವ ಕ್ರೀಡೆಗೂ ಸಿಗಬೇಕು ಅಂತ ಹೇಳಿದ್ದಾರೆ. ಈಗಾಗ್ಲೇ ಹಲವು ಕ್ರೀಡಾಧಾರಿತ ಸಿನಿಮಾಗಳು ಬಂದಿವೆ. ಚಕ್ ದೇ ಇಂಡಿಯಾ ಸೇರಿದಂತೆ ಹಲವು ಸಿನಿಮಾಗಳು ಭಾರತದ ರಾಷ್ಟ್ರೀಯ ಕ್ರೀಡೆಯ ಮಹತ್ವವನ್ನ ಸಾರಿ ಹೇಳಿವೆ. ಗೋಲ್ಡ್ ನಂತರದಲ್ಲಿ ಬರುತ್ತಿರೋ ಸುರ್ಮಾ ಸಿನಿಮಾ ಕೂಡ ಹಾಕಿ ಮೇಲೆ ಚಿತ್ರಿತಗೊಂಡಿದೆ.

ಕೇವಲ ಸಿನಿಮಾದಲ್ಲಿ ಮಾತ್ರ ಪ್ರೋತ್ಸಾಹ ಸಿಗುವಂತಾಗಬಾರದು. ಸಿನಿಮಾದಿಂದ ಕ್ರೀಡೆಗೂ ಉಪಯೋಗವಾಗುವಂತಿರಬೇಕು ಎಂದಿದ್ದಾರೆ. ಕ್ರಿಕೆಟ್ಗೆ ಮಾತ್ರವಲ್ಲ ಹಾಕಿ, ಕಬಡ್ಡಿ, ಫುಟ್ಬಾಲ್ಗೂ ಸೂಕ್ತ ಪ್ರೋತ್ಸಾಹ ಸಿಗಬೇಕಾದ ಅವಶ್ಯಕತೆ ಇದೆ. ಸರ್ಕಾರ ಕೂಡ ಅನ್ಯ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಬೇಕು ಎಂದಿದ್ದಾರೆ ಅಕ್ಷಯ್ ಕುಮಾರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...