alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಕಾಂತ್ ‘2.O’ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯ ಸುದ್ದಿ

ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟಿಸಿರುವ ಬಹುನಿರೀಕ್ಷೆಯ ಚಿತ್ರ ‘2.O’ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯ ಸುದ್ದಿ ಇಲ್ಲಿದೆ. ಜನವರಿಯಲ್ಲೂ ‘2.O’ ರಿಲೀಸ್ ಆಗ್ತಿಲ್ಲ. 2018 ರ ಏಪ್ರಿಲ್ ನಲ್ಲಿ ‘2.O’ ಬಿಡುಗಡೆಯಾಗಲಿದೆ ಎಂದು ಚಿತ್ರವನ್ನು ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ಸ್ ಹೇಳಿದೆ.

ಈ ವರ್ಷ ದೀಪಾವಳಿಗೆ ರಿಲೀಸ್ ಆಗಲಿದೆ ಎನ್ನಲಾಗಿತ್ತಾದರೂ, ಜನವರಿಗೆ ಮುಂದೂಡಲಾಗಿತ್ತು. ‘ಗೋಲ್ ಮಾಲ್ ಎಗೇನ್’ ಚಿತ್ರದ ಕಾರಣಕ್ಕೆ ಜನವರಿ ಬದಲಿಗೆ ಏಪ್ರಿಲ್ ನಲ್ಲಿ ‘2.O’ ತೆರೆಗೆ ಬರಲಿದೆ.

3D ಗ್ರಾಫಿಕ್ಸ್, ವಿ.ಎಫ್.ಎಕ್ಸ್. ಕೆಲಸಗಳು ನಡೆಯುತ್ತಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಶ್ಯುಯಲ್ ಎಫೆಕ್ಟ್ಸ್ ಸೂಪರ್ ವೈಸರ್ ಶ್ರೀನಿವಾಸ್ ಮೋಹನ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಶಂಕರ್ ನಿರ್ದೇಶಿಸಿರುವ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ರಜನಿಕಾಂತ್, ಅಕ್ಷಯ್ ಕುಮಾರ್, ಆಮಿ ಜಾಕ್ಸನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದ್ದು, 40 ಕೋಟಿ ರೂ. ಪ್ರಚಾರಕ್ಕಾಗಿಯೇ ಬಳಸಲಾಗ್ತಿದೆ.

2010 ರ ಬ್ಲಾಕ್ ಬಸ್ಟರ್ ‘ಎಂದಿರನ್’ ಮುಂದುವರೆದ ಭಾಗವಾಗಿ ‘2.O’ ಮೂಡಿ ಬಂದಿದೆ. ಚಿತ್ರದ ಬಗೆಗಿನ ಕುತೂಹಲ ಸಿನಿ ರಸಿಕರಲ್ಲಿ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...