alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವೀಟ್ ಡಿಲೀಟ್ ಮಾಡಿ ವಿವಾದಕ್ಕೆ ಸಿಲುಕಿದ ಅಕ್ಷಯ್

‘ರುಸ್ತುಂ’ ಚಿತ್ರದಲ್ಲಿ ಬಳಸಿದ್ದ ಸೇನಾ ಸಮವಸ್ತ್ರವನ್ನು ಹರಾಜು ಮಾಡಲು ಹೋಗಿ ವಿವಾದಕ್ಕೀಡಾಗಿದ್ದ, ನಟ ಅಕ್ಷಯ್ ಕುಮಾರ್ ಈಗ ಮತ್ತೊಮ್ಮೆ ವಿವಾದಕ್ಕೊಳಗಾಗಿದ್ದಾರೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗ್ತಿದ್ರೂ, ಈ ನಟ ಚಕಾರವೆತ್ತಿಲ್ಲ. ಹಾಗಂತ ಅಷ್ಟಕ್ಕೆ ಇವರು ಟ್ರೋಲ್ ಗೆ ಸಿಲುಕಿಲ್ಲ. 2012 ರಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ ಪೆಟ್ರೋಲ್ ಬೆಲೆ 62 ರಿಂದ 64 ರೂಪಾಯಿ ಆಗಿತ್ತು. ಆಗ ಅಕ್ಷಯ್ ‘ನಿಮ್ಮ ಬೈಸಿಕಲ್ ಗಳನ್ನು ಹೊರತೆಗೆದು ಸ್ಚಚ್ಛಗೊಳಿಸಿ, ರೋಡಿಗಿಳಿಸುವ ಸಮಯ ಬಂದಿದೆ. ಮತ್ತೊಮ್ಮೆ ಪೆಟ್ರೋಲ್ ಬೆಲೆ ಹೆಚ್ಚಾಗಲಿದೆ’ ಅಂತಾ ಟ್ವೀಟ್ ಮಾಡಿದ್ರು.

2012 ಫೆಬ್ರವರಿ 12 ರಂದು ಮಾಡಿದ್ದ ಆ ಟ್ವೀಟ್ ಅವರ ಖಾತೆಯಿಂದ ಈಗ ಡಿಲೀಟ್ ಆಗಿದ್ದು, ಸದ್ಯ ಟ್ರೋಲ್ ಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೆ ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 84 ರೂಪಾಯಿ ಆಗಿದೆ. ಆದ್ರೆ ಅಕ್ಷಯ್ ಕುಮಾರ್ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕೆಲವರು 2012 ರ ಅಕ್ಷಯ್ ಅವರ ಟ್ವೀಟ್ ಗೆ ರೀ ಟ್ವೀಟ್ ಮಾಡ್ತಿದ್ದಾರೆ. ಅದ್ರಲ್ಲೂ ಒಬ್ಬ ವ್ಯಕ್ತಿ ‘ಅಕ್ಷಯ್ ಸರ್, ನಾನು ನಿಮ್ಮ ಬಿಗ್ ಫ್ಯಾನ್, ನಿಮ್ಮ ಬೈಸಿಕಲ್ ನನಗೆ ಕೊಡ್ತೀರಾ, ಅದನ್ನು ಕ್ಲೀನ್ ಮಾಡಿ ಕೊಡ್ತೀನಿ’ ಅಂತಾ ಟ್ವಿಟ್ ಮಾಡಿದ್ದಾನೆ.

ಅದೇನೇ ಇರಲಿ ಪೆಟ್ರೋಲ್ ಬೆಲೆ ಏರುತ್ತಲೇ ಇದ್ರೂ, ಅಕ್ಷಯ್ ತುಟಿ ಬಿಚ್ಚದೆ ಇದ್ದದ್ದು, ಮತ್ತು ಈ ಸಮಯದಲ್ಲಿ ಅವರ ಖಾತೆಯಲ್ಲಿ ಅಂದಿನ ಟ್ವೀಟ್ ಡಿಲೀಟ್ ಆಗಿದ್ದು ವಿವಾದಕ್ಕೆ ಗುರಿಯಾಗಿದೆ. ಅಕ್ಷಯ್, ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಬೆಂಬಲಿಗರಾಗಿದ್ದು, ಅವರ ಸ್ವಚ್ಛಭಾರತ್ ಅಭಿಯಾನದಲ್ಲೂ ಭಾಗವಹಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...