alex Certify ಕಣ್ಣು ಕುಕ್ಕುತ್ತೆ ನಟ ಅಕ್ಷಯ್ ಕುಮಾರ್ ಮನೆಯ ಇಂಟೀರಿಯರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣು ಕುಕ್ಕುತ್ತೆ ನಟ ಅಕ್ಷಯ್ ಕುಮಾರ್ ಮನೆಯ ಇಂಟೀರಿಯರ್

ಸುಂದರ ಮನೆ ಪ್ರತಿಯೊಬ್ಬರ ಕನಸು. ಸ್ವಂತ ಮನೆ ಯಾರಿಗೆ ಬೇಡ ಹೇಳಿ. ಮತ್ತೆ ಮತ್ತೆ ನೋಡಬೇಕೆನ್ನುವಂತಹ ಮನೆ ಕಟ್ಟಬೇಕೆನ್ನುವುದು ಅನೇಕರ ಬಯಕೆ. ಆದ್ರೆ ಎಲ್ಲರಿಗೂ ಇದು ಅಸಾಧ್ಯ. ಬಾಲಿವುಡ್ ಸ್ಟಾರ್ ಗಳು ಇದರಲ್ಲಿ ಹಿಂದೆ ಬಿದ್ದಿಲ್ಲ. ಬಂಗಲೆಯನ್ನು ನಾಚಿಸುವಂತಹ ಮನೆ ಕಟ್ಟಿದ್ದಾರೆ.

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮನೆ ನೋಡಿದ್ರೆ ಮೂಗಿನ ಮೇಲೆ ಬೆರಳಿಡ್ತೀರಾ. ಒಬ್ಬ ಸ್ಟಾರ್ ಮನೆಯಲ್ಲಿ ಏನೆಲ್ಲಾ ಇರಬೇಕೋ ಎಲ್ಲ ಸೌಲಭ್ಯಗಳೂ ಅಕ್ಷಯ್ ಮನೆಯಲ್ಲಿದೆ. ಡುಪ್ಲೆಕ್ಸ್ ಮನೆಯ ಗ್ರೌಂಡ್ ಫ್ಲೋರ್ ನಲ್ಲಿ ಅಡುಗೆ ಮನೆ, ಡೈನಿಂಗ್ ರೂಂ ಹಾಗೂ ಹೋಂ ಥಿಯೇಟರ್ ಇದೆ.

ಎರಡನೇ ಮಹಡಿಯಲ್ಲಿ ಬೆಡ್ ರೂಂ, ಬಾಲ್ಕನಿ ಹಾಗೂ ಪತ್ನಿ ಟ್ವಿಂಕಲ್ ಆಫೀಸ್ ಇದೆ. ಅಕ್ಷಯ್, ಪತ್ನಿ ಟ್ವಿಂಕಲ್ ಮಾತಿಗೆ ಹೆಚ್ಚು ಬೆಲೆ ಕೊಡ್ತಾರೆ. ಟ್ವಿಂಕಲ್ ಹಾಗೂ ಮಗಳು ನಿತಾಶಾ ಮತ್ತು ಮಗ ಆರವ್ ಇಷ್ಟದಂತೆ ಡಿಸೈನ್ ಮಾಡಲಾಗಿದೆ. ಅಕ್ಷಯ್ ಮನೆಯ ಇಂಟೀರಿಯರ್ ಎಲ್ಲರನ್ನೂ ಆಕರ್ಷಿಸುತ್ತದೆ. ತಮ್ಮ ಮನೆಯನ್ನು ಟ್ವಿಂಕಲ್ ಡಿಸೈನ್ ಮಾಡಿದ್ದಾರೆ. ಟ್ವಿಂಕಲ್ ಇಂಟೀರಿಯರ್ ಡಿಸೈನರ್ ಕೂಡಾ ಹೌದು.

ಅಕ್ಷಯ್ ಗೆ ಆಟವೆಂದ್ರೆ ಬಹಳ ಇಷ್ಟ. ಹಾಗಾಗಿ ಅಕ್ಷಯ್ ಮನೆಯಲ್ಲಿ ಒಂದು ದೊಡ್ಡ ರೂಂನ್ನು ಗೇಮ್ಸ್ ಗಾಗಿ ಮೀಸಲಿಡಲಾಗಿದೆ. ಅಕ್ಷಯ್ ಮನೆಯಲ್ಲಿ ದೊಡ್ಡ ಕೈತೋಟ ಕೂಡ ಇದೆ. ಇದನ್ನು ನೋಡಿಕೊಳ್ಳಲು ಕೆಲಸದಾಳು ಇದ್ದಾನೆ. ಆದ್ರೆ ಅಕ್ಷಯ್ ಕೂಡ ಗಿಡಗಳ ಆರೈಕೆ ಮಾಡ್ತಾರೆ. ಮನೆ ದೊಡ್ಡದಾಗಿರುವುದರಿಂದ ಅಕ್ಷಯ್ ಪಾರ್ಟಿಗಳನ್ನು ಮನೆಯಲ್ಲಿಯೇ ಮಾಡ್ತಾರೆ. ತಡರಾತ್ರಿಯವರೆಗೆ ಶೂಟಿಂಗ್ ಮಾಡಲು ಇಷ್ಟಪಡದ ಅಕ್ಷಯ್, ಹೆಂಡತಿ ಮಕ್ಕಳ ಜೊತೆ ಸಮಯ ಕಳೆಯುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...