alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಷಯ್ ಕುಮಾರ್ ರನ್ನು ಮೆಚ್ಚಿಕೊಳ್ಳಲು ಇದಕ್ಕಿಂತ ಬೇರೆ ಕಾರಣ ಬೇಕಾ

akshay-kumarಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮಾನವೀಯ ಕಾರ್ಯಗಳಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆಪಾರ ದೇಶಪ್ರೇಮವುಳ್ಳ ಅಕ್ಷಯ್ ಕುಮಾರ್ ‘ಸರ್ಜಿಕಲ್ ಸ್ಟ್ರೈಕ್’ ಬಳಿಕ ಕೆಲವರ ಹೇಳಿಕೆಗೆ ಮನನೊಂದು ಯೋಧರು ಮತ್ತವರ ಕುಟುಂಬದ ಕುರಿತೂ ಯೋಚಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದರು.

ಇದೀಗ ಅಕ್ಷಯ್ ಕುಮಾರ್ ಮತ್ತೊಂದು ಮಹತ್ವದ ಕಾರ್ಯ ಮಾಡಿದ್ದಾರೆ. ಬಾಲಿವುಡ್ ಚಿತ್ರರಂಗಕ್ಕೆ ತಾವು ಕಾಲಿಡಲು ಕಾರಣಕರ್ತರಾಗಿದ್ದ ನಿರ್ಮಾಪಕರೊಬ್ಬರ ಕಷ್ಟಕ್ಕೆ ಸ್ಪಂದಿಸಿದ್ದಾರೆ.

ಬಾಲಿವುಡ್ ನಿರ್ಮಾಪಕ ರವಿ ಶ್ರೀವಾತ್ಸವ್, ತಮ್ಮ ‘ದ್ವಾರ್ಪಾಲ್’ ಚಿತ್ರಕ್ಕೆ ಅಕ್ಷಯ್ ಕುಮಾರ್ ರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಇದು ಅಕ್ಷಯ್ ಕುಮಾರ್ ಅವರ ಮೊದಲ ಚಿತ್ರ ಕೂಡಾ ಆಗಿತ್ತು. ಆದರೆ ಕಾರಣಾಂತರದಿಂದ ಆ ಚಿತ್ರ ಬಿಡುಗಡೆಯಾಗಲಿಲ್ಲ. ಆದರೆ ಅಕ್ಷಯ್ ಕುಮಾರ್ ಗೆ ತಾವು ಕೊಟ್ಟಿದ್ದ ಮಾತನ್ನು ಮರೆಯದ ರವಿ ಶ್ರೀವಾತ್ಸವ್, ‘ಸೌಗಂಧ್’ ಚಿತ್ರದ ಮೂಲಕ ಅಕ್ಷಯ್ ಕುಮಾರ್ ರನ್ನು ಬಾಲಿವುಡ್ ಗೆ ಪರಿಚಯಿಸಿದ್ದರು.

ಅಕ್ಷಯ್ ಕುಮಾರ್ ಇಂದು ಬಾಲಿವುಡ್ ನ ಯಶಸ್ವಿ ನಟ. ಅವರ ಚಿತ್ರದ ನಿರ್ಮಾಪಕರು ನೂರಾರು ಕೋಟಿ ರೂ. ಗಳನ್ನು ಗಳಿಸುತ್ತಿದ್ದಾರೆ. ಅಂದು ಅಕ್ಷಯ್ ಕುಮಾರ್ ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ರವಿ ಶ್ರೀವಾತ್ಸವ್ ಇಂದು ತೀರಾ ಬಡತನದಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದಾರೆ. ಜೊತೆಗೆ ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಈ ವಿಚಾರ ತಿಳಿಯುತ್ತಿದ್ದಂತೆಯೇ ಅಕ್ಷಯ್ ಕುಮಾರ್, ರವಿ ಶ್ರೀವಾತ್ಸವ್ ಅವರಿಗೆ ನೆರವಿನ ಹಸ್ತ ಚಾಚಿದ್ದಾರೆ. ಕಿಡ್ನಿ ಕಸಿಗೆ ತಗುಲುವ 17 ಲಕ್ಷ ರೂ. ಗಳನ್ನು ಭರಿಸಲು ಅಕ್ಷಯ್ ಕುಮಾರ್ ಮುಂದಾಗಿದ್ದಾರಲ್ಲದೇ ಇದುವರೆಗೆ ಭೇಟಿಯಾಗದಿದ್ದಕ್ಕೆ ಕ್ಷಮೆಯನ್ನೂ ಯಾಚಿಸಿದ್ದಾರೆ. ಆ ಮೂಲಕ ತಮ್ಮ ದೊಡ್ಡತನ ಮೆರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...