alex Certify
ಕನ್ನಡ ದುನಿಯಾ       Mobile App
       

Kannada Duniya

ಕಮಲ್ ಪುತ್ರಿಯ ಅರೆ ಬೆತ್ತಲೆ ಚಿತ್ರ ಲೀಕ್ ಮಾಡಿದ್ದು ಮಾಜಿ ಪ್ರಿಯಕರ…?

ಕೆಲ ದಿನಗಳ ಹಿಂದೆ, ಖ್ಯಾತ ನಟ ಕಮಲ ಹಾಸನ್ ಅವರ ಎರಡನೇ ಪುತ್ರಿ ಅಕ್ಷರ ಹಾಸನ್ ಅವರ ಅರೆ ಬೆತ್ತಲೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಕುರಿತು ಆಘಾತ ವ್ಯಕ್ತಪಡಿಸಿದ್ದ ಅಕ್ಷರ ಹಾಸನ್, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ತನಿಖೆ ಕೈಗೊಂಡಿದ್ದ ಮುಂಬೈ ಪೊಲೀಸರು ಈಗ ಅಕ್ಷರ ಹಾಸನ್ ಅವರ ಮಾಜಿ ಪ್ರಿಯಕರ ತನುಜ್ ವಿರ್ವಾನಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಕ್ಷರ ಹಾಸನ್ ಅವರ ಅರೆ ಬೆತ್ತಲೆ ಫೋಟೋಗಳು ಅವರ ಬೆಡ್ ರೂಮಿನಲ್ಲೇ ತೆಗೆದಿರುವ ಕಾರಣ ಪರಿಚಿತರಿಂದಲೇ ಈ ಕೃತ್ಯ ನಡೆದಿರಬಹುದೆಂಬ ಅನುಮಾನ ಪೊಲೀಸರಿಗಿದೆ.

ತಮ್ಮ ಮೇಲಿನ ಆರೋಪಗಳ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ತನುಜ್ ವಿರ್ವಾನಿ, ನಮ್ಮಿಬ್ಬರ ಪ್ರೀತಿಯ ವೇಳೆ ಇಂತಹ ಸಂಗತಿಗಳಿಗೆ ಅವಕಾಶ ನೀಡಿರಲಿಲ್ಲ. ನಾವಿಬ್ಬರು ಇಂದು ದೂರವಾಗಿದ್ದರೂ ಉತ್ತಮ ಸ್ನೇಹಿತರಾಗಿದ್ದೇವೆ. ಪೊಲೀಸರು ವಿಚಾರಣೆಗೆ ಕರೆದರೆ ಹಾಜರಾಗಿ ಹೇಳಿಕೆ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ.

View this post on Instagram

#aksharahaasan 😍 #leakedpics 😘

A post shared by BoGan (@bogan_18plus_official) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...