alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಸೆಲೆಬ್ರಿಟಿಗಳಿಗೆ ಅಂಬಾನಿ ಕುಟುಂಬದಿಂದ ಭರ್ಜರಿ ಪಾರ್ಟಿ

ಮುಕೇಶ್ ಅಂಬಾನಿ ಹಾಗೂ ನೀತಾ ದಂಪತಿಯ ಹಿರಿಯ ಪುತ್ರ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಭರ್ಜರಿ ಪಾರ್ಟಿ ಏರ್ಪಡಿಸಲಾಗಿತ್ತು.

ಕಳೆದ ವಾರ ಗೋವಾದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದ ಯುವ ಜೋಡಿಗೆ ಶುಭ ಹಾರೈಸಲು ಸೆಲೆಬ್ರಿಟಿಗಳ ದಂಡೇ ಆಗಮಿಸಿತ್ತು.

ಶಾರುಖ್ ಖಾನ್, ಐಶ್ವರ್ಯಾ ರೈ, ಕತ್ರೀನಾ ಕೈಫ್, ಜಾನ್ ಅಬ್ರಾಹಂ, ಕರಣ್ ಜೋಹರ್, ಕಿರಣ್ ರಾವ್ ಸೇರಿದಂತೆ ಬಾಲಿವುಡ್ ನ ಹಲವರು ಅಂಬಾನಿ ನಿವಾಸದಲ್ಲಿ ನಡೆದ ಗ್ರಾಂಡ್ ಪಾರ್ಟಿ ಎಂಜಾಯ್ ಮಾಡಿದ್ದಾರೆ.

ಹರ್ಭಜನ್ ಸಿಂಗ್, ಜಹೀರ್ ಖಾನ್ ಹಾಗೂ ಸಾಗರಿಕಾ ಕೂಡ ಪಾರ್ಟಿಗೆ ಆಗಮಿಸಿದ್ದರು. ಮೂಲಗಳ ಪ್ರಕಾರ ಡಿಸೆಂಬರ್ 8-12ರವರೆಗೆ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಮದುವೆ ಸಮಾರಂಭ ನಡೆಯಲಿದೆಯಂತೆ.

ಮುಂಬೈನಲ್ಲೇ ಮುಕೇಶ್ ಅಂಬಾನಿ ತಮ್ಮ ಮಗನ ಅದ್ಧೂರಿ ವಿವಾಹ ಆಯೋಜಿಸಲಿದ್ದಾರೆ ಎನ್ನಲಾಗ್ತಿದೆ. ಅಂಬಾನಿ ಕುಟುಂಬದ ಸೊಸೆಯಾಗ್ತಿರೋ ಶ್ಲೋಕಾ ಮೆಹ್ತಾ ಕೂಡ ಉದ್ಯಮಿ ಮನೆತನಕ್ಕೆ ಸೇರಿದವಳು.

ಪ್ರಸಿದ್ಧ ಡೈಮಂಡ್ ಉದ್ಯಮಿಯ ಕಿರಿಯ ಪುತ್ರಿ. ಹಾಗಾಗಿ ಎರಡೂ ಕುಟುಂಬಗಳ ಪ್ರತಿಷ್ಠೆಗೆ ತಕ್ಕಂತೆ ಮದುವೆ ಕೂಡ ಸಾಕಷ್ಟು ವೈಭವೋಪೇತವಾಗಿರಲಿದೆ. ಗೋವಾದಲ್ಲಿ ಪಾರ್ಟಿ ಮಾಡಿದ್ದ ಉಭಯ ಕುಟುಂಬಗಳು, ನಂತರ ಸಿದ್ದಿ ವಿನಾಯಕ ದೇವಸ್ಥಾನಕ್ಕೂ ಭೇಟಿ ನೀಡಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...