alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡೇ ದಿನದಲ್ಲಿ ಈ ಟೀಸರ್ ನೋಡಿದ್ದಾರೆ 72 ಲಕ್ಷ ಜನ

ajith_640x480_81494592795

ತಮಿಳು ನಟ ಅಜಿತ್ ಕುಮಾರ್ ಇಂಟರ್ನೆಟ್ ನಲ್ಲಿ ಹವಾ ಎಬ್ಬಿಸಿದ್ದಾರೆ. ಅಜಿತ್ ಅಭಿನಯದ ‘ವಿವೇಗಮ್’ ಚಿತ್ರದ ಟೀಸರ್ ಯುಟ್ಯೂಬ್ ನಲ್ಲಿ ಭರ್ಜರಿ ಹಿಟ್ ಆಗಿದೆ. ಟೀಸರ್ ರಿಲೀಸ್ ಆಗಿ 48 ಗಂಟೆಗಳೊಳಗೆ 7,200,000 ಬಾರಿ ಅದನ್ನು ವೀಕ್ಷಿಸಲಾಗಿದೆ. ಬುಧವಾರ ತಡರಾತ್ರಿ ‘ವಿವೇಗಮ್’ ಟೀಸರ್ ರಿಲೀಸ್ ಆಗಿತ್ತು.

ವಿವೇಗಮ್ ಚಿತ್ರವನ್ನು ಯುರೋಪ್ ನ ಹಿಮಚ್ಛಾದಿತ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಭಯೋತ್ಪಾದಕರನ್ನು ಮಟ್ಟಹಾಕುವ ಏಜೆಂಟ್ ಅವತಾರದಲ್ಲಿ ಅಜಿತ್ ಕಾಣಿಸಿಕೊಂಡಿದ್ದಾರೆ. ಒಂದು ನಿಮಿಷದ ಟೀಸರ್ ಬ್ಲಾಕ್ ಬಸ್ಟರ್ ಎನಿಸಿಕೊಂಡಿದ್ದು, ಸಿನೆಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

ವಿವೇಕ್ ಒಬೆರಾಯ್, ಕಾಜಲ್ ಅಗರ್ವಾಲ್, ಅಕ್ಷರಾ ಹಾಸನ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿವೇಕ್ ಒಬೆರಾಯ್ ಈ ಚಿತ್ರದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು, ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ವಿವೇಗಮ್’ ಟೀಸರ್, ಹಾಲಿವುಡ್ ನ ಆಕ್ಷನ್ ಚಿತ್ರಗಳನ್ನು ನೆನಪಿಸುವಂತಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...