alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ-2 ದಾಖಲೆ ಮುರಿದಿದೆ ಈ ಚಿತ್ರ

ಬಾಲಿವುಡ್ ನಲ್ಲಿ ಸದ್ಯ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇದೇ ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ಅಜಿತ್ ಕುಮಾರ್ ಚಿತ್ರ ವಿವೇಗಂ ಅಬ್ಬರ ನಡೆಯುತ್ತಿದೆ.

ಚೆನ್ನೈ ಬಾಕ್ಸ್ ಆಫೀಸ್ ನಲ್ಲಿ ವಿವೇಗಂ ಚಿತ್ರ ಮೊದಲ ವಾರದಲ್ಲಿಯೇ ದಾಖಲೆ ಪ್ರಮಾಣದಲ್ಲಿ ಗಳಿಕೆ ಕಂಡಿದೆ. ಚಿತ್ರ ಶನಿವಾರದವರೆಗೆ 67.92 ಕೋಟಿ ಗಳಿಕೆ ಕಂಡಿತ್ತು. ಚೆನ್ನೈನಲ್ಲಿ ಮೊದಲ ವೀಕೆಂಡ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿವೇಗಂ ಈ ವರ್ಷದ ಬ್ಲಾಕ್ಬಸ್ಟರ್ ಹಿಟ್ ಚಿತ್ರದ ಸಾಲಿಗೆ ಸೇರುತ್ತಿದೆ. ಬಾಹುಬಲಿ-2 ಚಿತ್ರ ಕೂಡ ವಿವೇಗಂ ಚಿತ್ರದ ಮುಂದೆ ಮಂಡಿಯೂರಿದೆ. ಬಾಹುಬಲಿ-2 ಚೆನ್ನೈನಲ್ಲಿ ಮೂರು ದಿನದಲ್ಲಿ 3.24 ಕೋಟಿ ಗಳಿಕೆ ಕಂಡಿತ್ತು. ಆದ್ರೆ ವಿವೇಗಂ 4.28 ಕೋಟಿ ಗಳಿಸಿದೆ.

ವಿವೇಗಂ ತಮಿಳು ಚಿತ್ರರಂಗದ ಮೊದಲ ಅಂತರಾಷ್ಟ್ರೀಯ ಪತ್ತೆದಾರಿ ಥ್ರಿಲ್ಲರ್ ಚಿತ್ರ. ಅಜಿತ್, ಚಿತ್ರದಲ್ಲಿ ಗುಪ್ತಚರ ಅಧಿಕಾರಿ ಚಿತ್ರದಲ್ಲಿ ಮಿಂಚಿದ್ದಾರೆ. ಶಿವ ನಿರ್ದೇಶನದ ಚಿತ್ರದಲ್ಲಿ ವಿವೇಕ್ ಒಬೆರಾಯ್ ,ಅಕ್ಷರಾ ಹಾಸನ್, ಕಾಜಲ್ ಅಗರ್ವಾಲ್ ಕಾಣಿಸಿಕೊಂಡಿದ್ದಾರೆ. ವಿವೇಕ್ ಒಬೆರಾಯ್ ವಿವೇಗಂ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...