alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯಿಂದಲೇ ಪಬ್ಲಿಕ್ ಆಯ್ತು ನಟಿ ಕಾಜೋಲ್ ಫೋನ್ ನಂಬರ್…!

ಬಾಲಿವುಡ್ ನಟ-ನಿರ್ಮಾಪಕ‌ ಅಜಯ್ ದೇವಗನ್ ಮಾಡಿರುವ‌ ಒಂದು ಎಡವಟ್ಟು ಇದೀಗ, ಸಾಮಾಜಿಕ ‌ಜಾಲತಾಣದಲ್ಲಿ‌ ಭಾರಿ‌ ಚರ್ಚೆಗೆ ಕಾರಣವಾಗಿದೆ.

ಅಜಯ್ ಅವರು ತಮ್ಮ‌ ಟ್ವೀಟರ್ ಖಾತೆಯಲ್ಲಿ‌,‌ ಪತ್ನಿ ಕಾಜೋಲ್ ಅವರ‌ ವಾಟ್ಸಾಪ್ ನಂಬರ್ ಟ್ವೀಟ್ ಮಾಡುವ ಮೂಲಕ‌ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. “ಕಾಜೋಲ್ ದೇಶದಲ್ಲಿ‌‌ ಇಲ್ಲ” ಎಂದು ಆಕೆಯ‌ ನಂಬರ್ ನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

ಇದರ ಬೆನ್ನಲ್ಲೇ ಅನೇಕರು ಕಾಜೋಲ್ ನಂಬರ್ ಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಆದರೆ‌ ಇನ್ನೊಬ್ಬರಿಗೆ ಕಳುಹಿಸಬೇಕಾದ ಸಂದೇಶವನ್ನು‌ ಅಜಯ್ ಟ್ವೀಟ್ ಮಾಡಿರುವ‌ ಸಾಧ್ಯತೆಯಿದೆ ಎಂದು ಟ್ವೀಟಿಗರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಕಾಜೋಲ್ ಅ.12 ರಂದು ತೆರೆ ಕಾಣಲಿರುವ ತಮ್ಮ ಚಿತ್ರದ‌ ಪ್ರಚಾರದಲ್ಲಿ‌ ಬ್ಯುಸಿಯಾಗಿದ್ದಾರೆ. ಚಿತ್ರವನ್ನು ಅಜಯ್ ನಿರ್ಮಿಸಿದ್ದು, ಪ್ರದೀಪ್ ಸರ್ಕಾರ್ ನಿರ್ದೇಶನ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...