alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಣಕ್ಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಅಜಯ್ ದೇವಗನ್

ಬುಧವಾರ ಬಾಲಿವುಡ್ ನಟ ಅಜಯ್ ದೇವಗನ್ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಜಯ್ ದೇವಗನ್ ಚಾಣಕ್ಯನ ಪಾತ್ರದಲ್ಲಿ ಮಿಂಚಲಿದ್ದಾರೆ. ನೀರಜ್ ಪಾಂಡೆ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಅಜಯ್ ದೇವಗನ್ ಈ ವಿಷ್ಯವನ್ನು ಟ್ವೀಟರ್ ನಲ್ಲಿ ತಿಳಿಸಿದ್ದಾರೆ. `ಭಾರತದ ಇತಿಹಾಸದಲ್ಲಿ ಮಹಾ ಚಿಂತಕರಾಗಿರುವ ಚಾಣಕ್ಯರ ಮೇಲೊಂದು ಚಿತ್ರ. ನಿರ್ದೇಶಕ ನೀರಜ್ ಪಾಂಡೆ’ ಎಂದು ಅಜಯ್ ದೇವಗನ್ ಟ್ವಿಟ್ ಮಾಡಿದ್ದಾರೆ. ರಾಜಕೀಯ ಚಿಂತಕ, ತತ್ವಜ್ಞಾನಿ ಚಾಣಕ್ಯರ ಜೀವನ ಹಾಗೂ ಶಿಕ್ಷಣವನ್ನು ಚಿತ್ರದಲ್ಲಿ ನೋಡಬಹುದಾಗಿದೆ.

ನೀರಜ್ ಕೆಲಸವನ್ನು ಹತ್ತಿರದಿಂದ ನೋಡಿದ್ದೇನೆ. ಚಾಣಕ್ಯನ ಪಾತ್ರ ನಿರ್ವಹಿಸಲು ನಾನು ಉತ್ಸುಕನಾಗಿದ್ದೇನೆ ಎಂದು ಅಜಯ್ ದೇವಗನ್ ಟ್ವಿಟ್ ಮಾಡಿದ್ದಾರೆ. ನಿರ್ದೇಶಕ ನೀರಜ್ ಪಾಂಡೆ ಸ್ಪೇಷಲ್ 26, ಎ ವೆಡ್ನೆಸ್ ಡೇ, ರುಸ್ತಂ ನಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಚಾಣಕ್ಯ ಚಿತ್ರದ ಬಗ್ಗೆ ನೀರಜ್ ಹೆಚ್ಚಿನ ಮಾಹಿತಿ ನೀಡಿಲ್ಲ. ಚಾಣಕ್ಯ ಚಿತ್ರ ನಿರ್ಮಾಣಕ್ಕೆ ಅನೇಕ ದಿನಗಳಿಂದ ಪ್ರಯತ್ನ ನಡೆಯುತ್ತಿತ್ತು. ಚಾಣಕ್ಯನ ಪಾತ್ರದಲ್ಲಿ ಅಜಯ್ ದೇವಗನ್ ಅವ್ರನ್ನು ಜನ ಇಷ್ಟಪಡಲಿದ್ದಾರೆಂಬ ನಂಬಿಕೆಯಿದೆ ಎಂದು ನೀರಜ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...