alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಜೋಲ್ ಗೆ ಪ್ರತಿದಿನ ಬೈತಾರೆ ಅಜಯ್ ದೇವಗನ್..!

kajiol

ಅಜಯ್ ದೇವಗನ್ ಹಾಗೂ ಕಾಜೋಲ್ ಬಾಲಿವುಡ್ ನ ಗೌರವಾನ್ವಿತ ಜೋಡಿ. ಇವರ ಬಗ್ಗೆ ಗಾಸಿಪ್ ಅಂತೂ ತೀರಾ ಅಪರೂಪ. ಇಬ್ಬರು ಮಕ್ಕಳ ಸುಂದರ ಸಂಸಾರ ಇವರದ್ದು. ಆದ್ರೂ ಪ್ರತಿನಿತ್ಯ ಅಜಯ್ ದೇವಗನ್, ಕಾಜೋಲ್ ಗೆ ಬೈತಾರಂತೆ. ಅದಕ್ಕೆ ಕಾರಣ ಕೇಳಿದ್ರೆ ನೀವು ಕೂಡ ದಂಗಾಗೋದು ಗ್ಯಾರಂಟಿ.

ಮಾಧ್ಯಮ ಸಂದರ್ಶನವೊಂದರಲ್ಲಿ ಖುದ್ದು ಕಾಜೋಲ್ ಈ ವಿಷಯ ಬಹಿರಂಗಪಡಿಸಿದ್ದಾರೆ. ನಾನು ನಿತ್ಯ ಅಜಯ್ ದೇವಗನ್ ರಿಂದ ಬೈಸಿಕೊಳ್ತೀನಿ, ನನ್ನ ಪ್ರಾಮಾಣಿಕತೆಯೇ ನನಗೆ ಶತ್ರು ಅಂತಾ ಹೇಳಿದ್ದಾರೆ. ತಂತ್ರಗಾರಿಕೆ ಕಾಜೋಲ್ ಗೆ ಗೊತ್ತಿಲ್ಲವಂತೆ.

ಅದರಿಂದಾಗಿಯೇ ಅಜಯ್ ದೇವಗನ್ ಇಂಡಸ್ಟ್ರಿಯಲ್ಲಿ ಎಷ್ಟೋ ಬಾರಿ ತೊಂದರೆಗೆ ಸಿಲುಕಿಕೊಳ್ತಾರೆ. ಎಲ್ಲವನ್ನೂ ಬಡಬಡನೆ ಹೇಳಿಬಿಡುವ ಅಭ್ಯಾಸ ಕಾಜೋಲ್ ಗಿದೆ. ಆದ್ರೆ ಉಳಿದವರು ಸುಳ್ಳು ಹೇಳಿದ್ರೂ ಕಾಜೋಲ್ ಅದನ್ನು ಮರೆತೇಬಿಡ್ತಾರೆ. ಇದೇ ಕಾರಣಕ್ಕೆ ಪಾರ್ಟಿಗಳಲ್ಲಿ ಅಜಯ್, ಕಾಜೋಲ್ ಗೆ ಬೈತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...