alex Certify
ಕನ್ನಡ ದುನಿಯಾ       Mobile App
       

Kannada Duniya

ಕಮಾಲ್ ಖಾನ್ ಗೆ ಕರಣ್ ಜೋಹರ್ ಹಣ ಕೊಟ್ಟಿದ್ದು ನಿಜಾನಾ..?

karan reactionಕರಣ್ ಜೋಹರ್ ಹಾಗೂ ಅಜಯ್ ದೇವಗನ್ ಮುಸುಕಿನ ಗುದ್ದಾಟ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ವಿವಾದದ ಬಗ್ಗೆ ಕರಣ್ ಜೋಹರ್ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಸ್ವಗೌರವ, ಖ್ಯಾತಿ, ಕಂಪನಿಯ ಗೌರವ  ಈ ಪ್ರಶ್ನೆಗೆ ಉತ್ತರಿಸಲು ಅನುಮತಿಸುವುದಿಲ್ಲ ಎನ್ನುವ ಮೂಲಕ ಜಾರಿಕೊಂಡಿದ್ದಾರೆ. ಮತ್ತೊಂದೆಡೆ ಉಲ್ಟಾ ಹೊಡೆದಿರುವ ಕಮಾಲ್ ಖಾನ್ ಪತ್ರಿಕಾಗೋಷ್ಠಿ ನಡೆಸಿ ಕರಣ್ ಜೋಹರ್ ಅವರ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಲು ಅಜಯ್ ದೇವಗನ್ ತಮಗೆ 25 ಲಕ್ಷ ರೂಪಾಯಿ ಕೊಟ್ಟಿದ್ದರು ಎಂದಿದ್ದಾರೆ.

ಕಮಾಲ್ ಖಾನ್ ಹೇಳಿದ್ದು ನಿಮಗೆಲ್ಲಾ ಗೊತ್ತೇ ಇದೆ, ರೆಕಾರ್ಡಿಂಗ್ ನಲ್ಲಿರುವುದೇ ಒಂದು, ಪತ್ರಿಕಾಗೋಷ್ಠಿಯಲ್ಲಿ ಆತ ಹೇಳಿರುವುದೇ ಮತ್ತೊಂದು. ರೆಕಾರ್ಡಿಂಗ್ ನಲ್ಲಿರುವುದು ತನ್ನ ಧ್ವನಿಯಲ್ಲ ಅಂತಾ ಕಮಾಲ್ ಖಾನ್ ನಿರಾಕರಿಸಿಲ್ಲ, ಸತ್ಯ ಏನು ಅನ್ನೋದನ್ನು ಜನರೇ ನಿರ್ಧರಿಸಲಿ ಅಂತಾರೆ ಅಜಯ್ ದೇವಗನ್.

ಅಷ್ಟಕ್ಕೂ ನಡೆದಿದ್ದು ಇಷ್ಟೆ, ಅಜಯ್ ದೇವಗನ್ ರ ‘ಶಿವಾಯ್’ ಹಾಗೂ ಕರಣ್ ಜೋಹರ್ ನಿರ್ದೇಶನದ ‘ಏ ದಿಲ್ ಹೈ ಮುಷ್ಕಿಲ್’ ಸಿನಿಮಾಗಳೆರಡೂ ಒಟ್ಟೊಟ್ಟಿಗೆ ಅಕ್ಟೋಬರ್ 28ರಂದು ರಿಲೀಸ್ ಆಗ್ತಿವೆ. ಬಾಕ್ಸ್ ಆಫೀಸ್ ಫೈಟ್ ಗೂ ಮುನ್ನವೇ ಕರಣ್, ದೇವಗನ್ ವಿರುದ್ಧ ಷಡ್ಯಂತ್ರ ಮಾಡಿದ್ದಾರಂತೆ. ‘ಏ ದಿಲ್ ಹೈ ಮುಷ್ಕಿಲ್’ ಚಿತ್ರವನ್ನು ಹೊಗಳಲು ಮತ್ತು ದೇವಗನ್ ರ ‘ಶಿವಾಯ್’ ಚಿತ್ರದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲು ಕಮಾಲ್ ಆರ್.ಖಾನ್ ಗೆ ಕರಣ್ ಜೋಹರ್ 25 ಲಕ್ಷ ರೂಪಾಯಿ ಕೊಟ್ಟಿದ್ದಾರಂತೆ. ಈ ವಿಚಾರವನ್ನು ಕಮಾಲ್ ಖಾನ್, ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರ ಬಳಿ ಬಾಯ್ಬಿಟ್ಟಿದ್ದಾರೆ. ಅವರಿಬ್ಬರ ಫೋನ್ ಸಂಭಾಷಣೆ ಈಗ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದು, ದೇವಗನ್ ಅದನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದರು. ಅಷ್ಟೇ ಅಲ್ಲ ಈ ಬಗ್ಗೆ ತನಿಖೆ ಆಗಬೇಕೆಂದು ಒತ್ತಾಯಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...