alex Certify
ಕನ್ನಡ ದುನಿಯಾ       Mobile App
       

Kannada Duniya

2 ಬಾರಿ ಜೈಲು ಪಾಲಾಗಿದ್ದರು ಈ ಬಾಲಿವುಡ್ ನಟ

ಬಾಲಿವುಡ್ ತಾರೆಗಳಿಗೂ ವಿವಾದಗಳಿಗೂ ನಂಟು ಇದ್ದೇ ಇದೆ. ಸಲ್ಮಾನ್ ಖಾನ್, ಸಂಜಯ್ ದತ್ ಸೇರಿದಂತೆ ಹಲವರು ಜೈಲು ವಾಸವನ್ನೂ ಅನುಭವಿಸಿದ್ದಾರೆ. ನಟ ಅಜಯ್ ದೇವಗನ್ ಕೂಡ ಎರಡು ಬಾರಿ ಜೈಲುಪಾಲಾಗಿದ್ದರಂತೆ.

18ರ ಹರೆಯದಲ್ಲಿ ಅಜಯ್ ದೇವಗನ್ ಫೂಲ್ ಔರ್ ಕಾಂಟೆ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಅವರಿಗೆ ಇದೆಲ್ಲಾ ಇಷ್ಟವಿರಲಿಲ್ಲ, ಆರಾಮಾಗಿ ಸ್ನೇಹಿತರೊಂದಿಗೆ ಸುತ್ತಾಡಿಕೊಂಡು, ಲೈಫ್ ಎಂಜಾಯ್ ಮಾಡೋಣ ಎನಿಸುತ್ತಿತ್ತು.

ಆ ಸಮಯದಲ್ಲಿ ಅಜಯ್ ದೇವಗನ್ ಗೂಂಡಾಗಿರಿ ಕೂಡ ಮಾಡುತ್ತಿದ್ದರಂತೆ. ಅವರ ತಂದೆಯ ಗನ್ ಕೂಡ ತೆಗೆದುಕೊಂಡು ಹೋಗುತ್ತಿದ್ರು. ಇದೇ ಕಾರಣಕ್ಕೆ ಎರಡು ಬಾರಿ ಅವರನ್ನು ಲಾಕಪ್ ಗೆ ತಳ್ಳಲಾಗಿತ್ತು. ಇನ್ನೂ ಒಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಅಜಯ್ ದೇವಗನ್ ರ ನಿಜವಾದ ಹೆಸರು ವಿಶಾಲ್.

1991ರಲ್ಲಿ ವಿಶಾಲ್ ಹೆಸರಿನ ಹಲವು ನಟರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರಂತೆ. ಹಾಗಾಗಿ ಗೊಂದಲವಾಗಬಾರದೆಂಬ ಕಾರಣಕ್ಕೆ ಅಜಯ್ ದೇವಗನ್ ಅಂತಾ ಹೆಸರು ಬದಲಾಯಿಸಿಕೊಂಡರು. ಸದ್ಯ ರೇಡ್ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿರೋ ಅಜಯ್ ದೇವಗನ್, ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...