alex Certify
ಕನ್ನಡ ದುನಿಯಾ       Mobile App
       

Kannada Duniya

25 ವರ್ಷಗಳ ಬಳಿಕ ಲಿಪ್ ಲಾಕ್ : ಕೋಪಗೊಂಡ್ಲಾ ಪತ್ನಿ..?

shivay_1474438275

ನಟ ಅಜಯ್ ದೇವಗನ್ ಬಾಲಿವುಡ್ ಗೆ ಕಾಲಿಟ್ಟು 25 ವರ್ಷ ಕಳೆದಿದೆ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ಅಜಯ್, ಈವರೆಗೂ ಯಾವುದೇ ಹಿರೋಯಿನ್ ಜೊತೆ ಲಿಪ್ ಲಾಕ್ ಮಾಡಿರಲಿಲ್ಲ. ಲಿಪ್ ಲಾಕ್ ದೃಶ್ಯಗಳಿಂದ ದೂರವುಳಿದಿದ್ದ ಅಜಯ್ 25 ವರ್ಷಗಳ ನಂತ್ರ ತಮ್ಮ ವೃತ್ತಿಜೀವನದ ನಿಯಮವನ್ನು ಮುರಿದಿದ್ದಾರೆ.

ಯಸ್, ‘ಶಿವಾಯ್’ ಚಿತ್ರದಲ್ಲಿ ಅಭಿಮಾನಿಗಳು ಅಜಯ್ ಹೊಸ ಅವತಾರವನ್ನು ನೋಡಬಹುದಾಗಿದೆ. ನಟಿ ಏರಿಕಾ ಜೊತೆ ಮೂರು ನಿಮಿಷಗಳ ಕಾಲ ಲಿಪ್ ಲಾಕ್ ಮಾಡಿದ್ದಾರೆ ಕಾಜೋಲ್ ಪತಿ. ಮತ್ತೆ ‘ಶಿವಾಯ್’ ಚಿತ್ರದ ಎರಡನೇ ಹಾಡು ರಿಲೀಸ್ ಆಗಲಿದೆ. ಸೆಪ್ಟೆಂಬರ್ 19 ರಂದು ಶಿವಾಯ್ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಗಿತ್ತು. ಇದು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಚಿತ್ರದ ‘ಬೋಲೋ ಹರ್ ಹರ್’ ಹಾಡು ಈಗಾಗಲೇ ರಿಲೀಸ್ ಆಗಿದ್ದು, ಸಾಕಷ್ಟು ಜನರು ಇದನ್ನು ಗುನುಗುತ್ತಿದ್ದಾರೆ. ಅಕ್ಟೋಬರ್ 28ರಂದು ಚಿತ್ರ ತೆರೆಗೆ ಬರಲಿದೆ. ನಟ, ನಿರ್ದೇಶಕ ಹಾಗೂ ನಿರ್ಮಾಪಕ ಎಲ್ಲ ಜವಾಬ್ದಾರಿಯನ್ನೂ ಅಜಯ್ ನಿರ್ವಹಿಸಿದ್ದಾರೆ. 25 ವರ್ಷಗಳ ನಂತ್ರ ಲಿಪ್ ಲಾಕ್ ಮಾಡಿರುವ ಪತಿಯ ಬಗ್ಗೆ ಕಾಜೋಲ್ ಏನು ಹೇಳ್ತಾಳೆ ಗೊತ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...