alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಹರಿದಾಡ್ತಿದೆ ಖ್ಯಾತ ನಟನ ಅಪಘಾತದ ಸುಳ್ಳು ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲ ಸುಳ್ಳು ಸುದ್ದಿಗಳು ಕ್ಷಣಾರ್ಧದಲ್ಲೇ ವೈರಲ್ ಆಗುತ್ತವೆ. ಇದನ್ನು ನೋಡಿದವರು ಸತ್ಯಾಂಶ ತಿಳಿಯುವವರೆಗೂ ನಿಜವೆಂದೇ ನಂಬಿರುತ್ತಾರೆ. ಖ್ಯಾತ ಬಾಲಿವುಡ್ ನಟರೊಬ್ಬರಿಗೆ ಅಪಘಾತವಾಗಿದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿದ್ದು, ಅದು ನಿಜವಲ್ಲವೆಂಬ ಸಂಗತಿ ಈಗ ಬಹಿರಂಗವಾಗಿದೆ.

ನಟ ಅಜಯ್ ದೇವಗನ್, ಮಹಾಬಲೇಶ್ವರಕ್ಕೆ ತಮ್ಮ ಖಾಸಗಿ ಹೆಲಿಕಾಪ್ಟರ್ ನಲ್ಲಿ ಹೋಗುವಾಗ ಅಪಘಾತಕ್ಕೀಡಾಗಿದ್ದಾರೆಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಹರಿದಾಡಿದ್ದು, ವೈರಲ್ ಆಗಿತ್ತು.

ಬಳಿಕ ಈ ಕುರಿತು ಸ್ಪಷ್ಟನೆ ನೀಡಿರುವ ಅಜಯ್ ದೇವಗನ್ ರ ನಿಕಟವರ್ತಿಗಳು, ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಅಜಯ್ ದೇವಗನ್ ತಮ್ಮ ದೈನಂದಿನ ಕಾರ್ಯಗಳಲ್ಲಿ ಎಂದಿನಂತೆ ತೊಡಗಿಕೊಂಡಿದ್ದು, ಯಾರೋ ಕುಹಕಿಗಳು ಬೇಕೆಂದೇ ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆಂದು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...