alex Certify
ಕನ್ನಡ ದುನಿಯಾ       Mobile App
       

Kannada Duniya

ಅದ್ಭುತವಾಗಿದೆ ‘ಶಿವಾಯ್’ ಎರಡನೇ ಟ್ರೈಲರ್

shivay2-1

ಬಾಲಿವುಡ್ ಚಿತ್ರ ‘ಶಿವಾಯ್’ ದೀಪಾವಳಿಯಂದು ತೆರೆಗೆ ಬರ್ತಾ ಇದೆ. ಕೆಲವೇ ದಿನಗಳಲ್ಲಿ ಬಿಡುಗಡೆಯಾಗ್ತಿರುವ ಅಜಯ್ ದೇವಗನ್ ಅಭಿನಯದ ಚಿತ್ರದ ಹೊಸ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಹೊಸ ಟ್ರೈಲರ್ ಒಂದೊಂದು ದೃಶ್ಯವೂ ಒಂದೊಂದು ಕಥೆ ಹೇಳ್ತಿದೆ.

2.47 ನಿಮಿಷದ ಈ ಎರಡನೇ ಟ್ರೈಲರ್ ನಲ್ಲಿ ತಂದೆ ಹಾಗೂ ಮಗಳ ಭಾವನಾತ್ಮಕ ಸಂಬಂಧವನ್ನು ತೋರಿಸಲಾಗಿದೆ. ಪ್ರತಿಯೊಂದು ದೃಶ್ಯವೂ ಪ್ರೇಕ್ಷಕನ ಕುತೂಹಲವನ್ನು ಹೆಚ್ಚಿಸುವಂತಿದೆ. ಆಕ್ಷನ್ ಹಿರೋ ಅಜಯ್ ದೇವಗನ್ ಈ ಚಿತ್ರದಲ್ಲಿ ಬೇರೆ ರೀತಿಯಲ್ಲಿಯೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಟ್ವಿಟರ್ ನಲ್ಲಿ ಅಜಯ್ ಚಿತ್ರದ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಕೆಲ ಸಂಭಾಷಣೆಗಳನ್ನು ಕೇಳಬಹುದಾಗಿದೆ. ಅಜಯ್ ಚಿತ್ರಕ್ಕೆ ಟಕ್ಕರ್ ನೀಡಲು ‘ಎ ದಿಲ್ ಹೇ ಮುಷ್ಕಿಲ್’ ಚಿತ್ರ ಕೂಡ ಅಂದೇ ತೆರೆಗೆ ಬರ್ತಾ ಇದ್ದು, ಪ್ರೇಕ್ಷಕ ಯಾರಿಗೆ ಫುಲ್ ಮಾರ್ಕ್ಸ್ ನೀಡ್ತಾನೆ ಕಾದು ನೋಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...