alex Certify
ಕನ್ನಡ ದುನಿಯಾ       Mobile App
       

Kannada Duniya

ಅಜಯ್ ದೇವಗನ್ ಜೊತೆ ಮತ್ತೆ ನಟಿಸಲಿದ್ದಾಳೆ ಕರೀನಾ

kareena_sm

ನಟ ಅಜಯ್ ದೇವಗನ್ ಹಾಗೂ ಕರೀನಾ ಕಪೂರ್ ಖಾನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಅಜಯ್ ಹಾಗೂ ಕರೀನಾಳನ್ನು ಬಿಗ್ ಸ್ಕ್ರೀನ್ ನಲ್ಲಿ ಮತ್ತೆ ಒಟ್ಟಿಗೆ ನೋಡುವ ಅವಕಾಶ ಒದಗಿ ಬಂದಿದೆ.

ಸದ್ಯ ಕರೀನಾ ಚಿತ್ರಕಥೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾಳಂತೆ. ಆಕೆ ಕೈನಲ್ಲಿ ಈಗ ಮೂರು ಚಿತ್ರಗಳಿವೆ. ‘ಸದ್ಮಾ’ ರಿಮೇಕ್ ಆಗ್ತಿದ್ದು, ಅದ್ರಲ್ಲಿ ಬೇಬೋ ನಟಿಸಲಿದ್ದಾಳೆ. ರಾಜಕುಮಾರಿ ಅಮೃತ್ ಕೌರ್ ಜೀವನಚರಿತ್ರೆ ಚಲನಚಿತ್ರವಾಗ್ತಾ ಇದ್ದು, ಇದರಲ್ಲೂ ಕರೀನಾಳನ್ನು ನೋಡಬಹುದು. ಮೋರನೇಯ ಚಿತ್ರ ದೇವಗನ್ ಜೊತೆ ‘ಬಾದ್ ಶಾಹೋ’.

ಕೆಲ ದಿನಗಳ ಹಿಂದೆ ನಿರ್ದೇಶಕ ಮಿಲನ್, ಕರೀನಾ ಜೊತೆ ಮಾತುಕತೆ ನಡೆಸಿದ್ದಾರಂತೆ. ರಾಜಸ್ಥಾನಿ ಪ್ರಿನ್ಸಸ್ ಪಾತ್ರಕ್ಕೆ ಮೊದಲು ಶ್ರುತಿ ಹಾಸನ್ ಮತ್ತು ಲಿಸಾ ಹೇಡನ್ ಹೆಸರು ಕೇಳಿ ಬಂದಿತ್ತು. ಆದ್ರೆ ಕಥೆ ಬದಲಾದ ನಂತರ ಕರೀನಾ ಸೂಕ್ತ ಎಂದು ನಿರ್ದೇಶಕರು ನಿರ್ಧರಿಸಿದ್ದಾರೆ. ಸದ್ಯ ಮೂರು ಚಿತ್ರಗಳು ಕೈನಲ್ಲಿದ್ದು, ಯಾವ ಚಿತ್ರಕ್ಕೆ ಕರೀನಾ ಮೊದಲು ಡೇಟ್ ಕೊಡ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.

ಕರೀನಾ ಮತ್ತು ಅಜಯ್ LOC ಕಾರ್ಗಿಲ್, ಯುವ ಓಂಕಾರ, ಗೋಲ್ಮಾಲ್ ರಿಟರ್ನ್ಸ್, ಹಲ್ಲಾ ಬೋಲ್, ಗೋಲ್ಮಾಲ್ 3, ಸತ್ಯಾಗ್ರಹ  ಮತ್ತು ಸಿಂಗಮ್ ರಿಟರ್ನ್ಸ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...