alex Certify
ಕನ್ನಡ ದುನಿಯಾ       Mobile App
       

Kannada Duniya

ಗಣೇಶನ ದರ್ಶನಕ್ಕೆ ಬಂದ ಐಶ್ ಫುಲ್ ಸುಸ್ತ್

ಬಾಲಿವುಡ್ ನ ಬಚ್ಚನ್ ಕುಟುಂಬದಲ್ಲಿ ಹಬ್ಬಗಳನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಗಣಪತಿ ಹಬ್ಬ, ದೀಪಾವಳಿ ಸೇರಿದಂತೆ ಎಲ್ಲ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷವೂ ಬಚ್ಚನ್ ಕುಟುಂಬದ ಸದಸ್ಯರು ಸಾರ್ವಜನಿಕ ಗಣಪತಿ ದರ್ಶನ ಪಡೆಯುತ್ತಾರೆ. ಈ ಬಾರಿ ಕೂಡ ಬಿಗ್ ಬಿ ಸೊಸೆ, ಬಾಲಿವುಡ್ ಬೆಡಗಿ ಐಶ್ವರ್ಯ ರೈ ಬಚ್ಚನ್ ಸಾರ್ವಜನಿಕ ಗಣಪತಿ ದರ್ಶನ ಪಡೆದಿದ್ದಾಳೆ.

ಐಶ್ವರ್ಯ ರೈ ಬಚ್ಚನ್ ಮಗಳು ಆರಾಧ್ಯ ಜೊತೆ ಗಣೇಶನ ದರ್ಶನಕ್ಕೆ ಬಂದಿದ್ದಳು. ಬಿಳಿ ಬಣ್ಣದ ಚೂಡಿದಾರದಲ್ಲಿ ಐಶ್ ಸುಂದರವಾಗಿ ಕಾಣ್ತಿದ್ದರೆ ಕೇಸರಿ ಬಣ್ಣದ ಡ್ರೆಸ್ ನಲ್ಲಿ ಆರಾಧ್ಯ ಮುದ್ದು ಮುದ್ದಾಗಿ ಕಾಣ್ತಿದ್ದಳು. ಅಮ್ಮ-ಮಗಳನ್ನು ನೋಡಲು ಜನರ ದಂಡೇ ಅಲ್ಲಿ ನೆರೆದಿತ್ತು. ಗಣೇಶನ ದರ್ಶನಕ್ಕೆ ಬಂದ ಐಶ್ವರ್ಯ ಸುಸ್ತಾಗಿ ಹೋದ್ಲು.

ಸಾರ್ವಜನಿಕರಿಗೆ ದಾರಿ ಬಿಡುವಂತೆ ವಿನಂತಿ ಮಾಡ್ತಿದ್ದ ಐಶ್, ಮಗಳ ಜೊತೆ ಗಣೇಶನ ದರ್ಶನ ಪಡೆದು ಹೊರ ಬರುವುದ್ರಲ್ಲಿ ಸುಸ್ತಾಗಿದ್ದಳು. ಅದ್ರ ಕೆಲ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...