alex Certify
ಕನ್ನಡ ದುನಿಯಾ       Mobile App
       

Kannada Duniya

2 ತಿಂಗಳಲ್ಲಿ ಅಮೀರ್ ಮಾಡದ ಕೆಲಸವನ್ನು 4 ದಿನದಲ್ಲಿ ಮಾಡಿದ್ಲು ಐಶ್

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಕೇನ್ಸ್ ಚಲನಚಿತ್ರೋತ್ಸವದ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದಾಳೆ. ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ 2 ತಿಂಗಳಲ್ಲಿ ಮಾಡದ ಕೆಲಸವನ್ನು ಐಶ್ ನಾಲ್ಕು ದಿನಗಳಲ್ಲಿ ಮಾಡಿ ಮುಗಿಸಿದ್ದಾಳೆ.

ಐಶ್ವರ್ಯ ರೈ ಬಚ್ಚನ್  ಕೆಲ ದಿನಗಳ ಹಿಂದೆ ಇನ್ಸ್ಟ್ರಾಗ್ರಾಮ್ ನಲ್ಲಿ ಅಕೌಂಟ್ ಓಪನ್ ಮಾಡಿದ್ದಾಳೆ. ಐಶ್ ಈಗ 9 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಅದೇ ಮಾರ್ಚ್ 14ರಂದು ಇನ್ಸ್ಟ್ರಾಗ್ರಾಮ್ ಗೆ ಬಂದಿರುವ ಅಮೀರ್ ಖಾನ್ ಈವರೆಗೆ 8 ಲಕ್ಷ 77 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.

ಐಶ್ವರ್ಯ ರೈ ಇನ್ಸ್ಟ್ರಾಗ್ರಾಮ್ ಮೇ11 ರಂದು ಲೈವ್ ಆಗಿತ್ತು. ಆಗ ಐಶ್ ಒಬ್ಬ ಫಾಲೋವರ್ಸ್ ಹೊಂದಿರಲಿಲ್ಲ. ಮಗಳು ಆರಾಧ್ಯ ಹುಟ್ಟಿದ ಫೋಟೋವನ್ನು ಮೊದಲು ಪೋಸ್ಟ್ ಮಾಡಿದ ಐಶ್ ನಾನು ಮತ್ತೆ ಜನಿಸಿದೆ ಎಂದು ಶೀರ್ಷಿಕೆ ಹಾಕಿದ್ದರು. ಆಶ್ಚರ್ಯದ ವಿಷ್ಯವೆಂದ್ರೆ ಐಶ್ವರ್ಯ ಪತಿ ಅಭಿಷೇಕ್ ಹಾಗೂ ಮಾವ ಅಮಿತಾಬ್ ಬಚ್ಚನ್ ಕೂಡ ಇನ್ಸ್ಟ್ರಾಗ್ರಾಮ್ ನಲ್ಲಿದ್ದಾರೆ. ಆದ್ರೆ ಈವರೆಗೂ ಐಶ್ ಯಾರನ್ನೂ ಫಾಲೋ ಮಾಡ್ತಿಲ್ಲ. ಅಭಿಷೇಕ್ ಮಾತ್ರ ಐಶ್ ಫಾಲೋ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...