alex Certify
ಕನ್ನಡ ದುನಿಯಾ       Mobile App
       

Kannada Duniya

ಶೂಟಿಂಗ್ ವೇಳೆ ಸೆಟ್ ಬಿಟ್ಟು ಹೊರ ಹೋದ ಐಶ್

Aishwarya-Ra

ಹಿಂದಿನ ವರ್ಷ ಬಾಲಿವುಡ್ ಗೆ ರೀ ಎಂಟ್ರಿ ಕೊಟ್ಟವರು ಐಶ್ವರ್ಯ ರೈ ಬಚ್ಚನ್. ಸೌಂದರ್ಯದ ಜೊತೆಗೆ ಉತ್ತಮ ನಟನೆಯಿಂದ ಅಭಿಮಾನಿಗಳ ಮನ ಗೆದ್ದ ನಟಿ ಐಶ್. ಸದ್ಯ ಸರಬ್ಜಿತ್ ಚಿತ್ರದ ಶೂಟಿಂಗ್ ನಲ್ಲಿ ಐಶ್ವರ್ಯ ಬ್ಯುಸಿಯಾಗಿದ್ದಾರೆ. ಶೂಟಿಂಗ್ ವೇಳೆ ಸ್ಕ್ರಿಪ್ಟ್ ನೋಡಿ ಭಾವುಕರಾದರಂತೆ ಐಶ್ವರ್ಯ.

ಸರಬ್ಜಿತ್ ಜೀವನಾಧಾರಿತ ಚಿತ್ರ. ಇದರಲ್ಲಿ ಸರಬ್ಜಿತ್ ಸಹೋದರಿ ಪಾತ್ರ ಮಾಡುತ್ತಿರುವ ಐಶ್ವರ್ಯ ಸಂಭಾಷಣೆ ನೋಡಿ ಭಾವುಕರಾದರಂತೆ. ಸೆಟ್ ಗೆ ಬಂದು ಸಂಭಾಷಣೆ ಓದಿದ ತಕ್ಷಣ ಐಶ್ ಕಣ್ಣಲ್ಲಿ ನೀರು ಬಂತಂತೆ. ತಕ್ಷಣ ಸೆಟ್ ನಿಂದ ಐಶ್ ಹೊರನಡೆದರಂತೆ. ನಂತ್ರ ಮತ್ತೆ ಬಂದ ಐಶ್ವರ್ಯ ಒಂದೇ ಟೇಕ್ ನಲ್ಲಿ ದೃಶ್ಯ ಮುಗಿಸಿದ್ದಾರಂತೆ.

ಐಶ್ವರ್ಯ ಡೆಡಿಕೇಷನ್ ನೋಡಿ ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರಂತೆ. ತಮ್ಮ ಪಾತ್ರದಲ್ಲಿ ನೈಜತೆ ತುಂಬಲು ಸಾಕಷ್ಟು ಪ್ರಯತ್ನಪಡುತ್ತಿರುವ ಐಶ್ವರ್ಯ, ಮೂರು ನಾಲ್ಕು ಬಾರಿ ಸ್ಕ್ರಿಪ್ಟ್ ಓದುತ್ತಾರಂತೆ. ಚಿತ್ರದಲ್ಲಿ ಸರಬ್ಜಿತ್ ಕುಟುಂಬದ ನೋವನ್ನು ತೋರಿಸಲಾಗಿದೆ. ಮುಂಬೈನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...