alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಐಶ್ವರ್ಯ ರೈ

aishwarya_airport

ಸೆಲೆಬ್ರಿಟಿಗಳಿಗೆ ವರದಿಗಾರರು ಹಾಗೂ ಛಾಯಾಚಿತ್ರಕಾರರಿಂದ ತಪ್ಪಿಸಿಕೊಳ್ಳುವುದು ದೊಡ್ಡ ತಲೆನೋವಿನ ಕೆಲಸ. ವಿಮಾನ ನಿಲ್ದಾಣದಿಂದ ಹೊರಗೆ ಬರುವಾಗ ಅವರ ದೊಡ್ಡ ದಂಡೇ ನೆರೆದಿರುತ್ತದೆ. ಸೆಲೆಬ್ರಿಟಿಗಳ ಫೋಟೋ ತೆಗೆಯುವುದು ಅಪರಾಧವಲ್ಲ. ಆದ್ರೆ ನೂಕು ನುಗ್ಗಲು ದುರ್ಘಟನೆಗೆ ಕಾರಣವಾದ್ರೆ ಕಷ್ಟ. ಬಾಲಿವುಡ್ ಬೆಡಗಿ ಐಶ್ವರ್ಯ ರೈ ಬಚ್ಚನ್ ಹಾಗೂ ತಾಯಿಗೆ ಈ ಅನುಭವವಾಗಿದೆ.

ಐಶ್ವರ್ಯ ರೈ ಬಚ್ಚನ್ ಮಗಳು ಆರಾಧ್ಯ ಹಾಗೂ ತಾಯಿ ಬಿಂದ್ರಾ ರಾಯ್ ಜೊತೆ ಮುಂಬೈ ವಿಮಾನ ನಿಲ್ದಾಣದಿಂದ ಹೊರಗೆ ಬರ್ತಾ ಇದ್ದರು. ಅಲ್ಲಿ ನೆರೆದಿದ್ದ ಮಾಧ್ಯಮ ಮಿತ್ರರು, ಐಶ್ವರ್ಯ ಫೋಟೋ ತೆಗೆಯಲು ಹಾಗೂ ಬೈಟ್ ಪಡೆದುಕೊಳ್ಳಲು ಮುಗಿ ಬಿದ್ದಿದ್ದಾರೆ. ಈ ವೇಳೆ ವರದಿಗಾರನೊಬ್ಬ ಐಶ್ ಹತ್ತಿರಕ್ಕೆ ಬಂದಿದ್ದಾನೆ. ಇದನ್ನು ನೋಡಿದ ಐಶ್ ಬಾಡಿಗಾರ್ಡ್ ಆತನನ್ನು ದೂರ ಸರಿಸುವ ಯತ್ನ ಮಾಡಿದ್ದಾನೆ.

ಈ ವೇಳೆ ಸ್ವಲ್ಪ ನೂಕು ನುಗ್ಗಲಾಗಿದೆ. ವರದಿಗಾರ ನಿಯಂತ್ರಣ ತಪ್ಪಿ ಐಶ್ವರ್ಯ ರೈ ಅಮ್ಮ ಬಿಂದ್ರಾ ಮೇಲೆ ಬಿದ್ದಿದ್ದಾನೆ. ಬಿಂದ್ರಾ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಐಶ್ ತಾಯಿಯ ತಲೆಗೆ ಪೆಟ್ಟಾಗಿದ್ದು, ರಕ್ತ ಸುರಿದಿದೆ. ಇದನ್ನು ನೋಡಲು ವರದಿಗಾರರೊಂದೇ ಅಲ್ಲ ನಿಲ್ದಾಣದಲ್ಲಿ ನೆರೆದಿದ್ದ ಪ್ರಯಾಣಿಕರೆಲ್ಲ ಬಂದಿದ್ದಾರೆ. ಈ ಗಲಾಟೆಯಿಂದ ಹೇಗೋ ತಪ್ಪಿಸಿಕೊಂಡು ಬಂದ ಐಶ್ ತಾಯಿಯೊಂದಿಗೆ ತಕ್ಷಣ ಕಾರು ಹತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...