alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ‘ಪದ್ಮಾವತ್’ ಗೆ ದೀಪಿಕಾ ಆಯ್ಕೆಯಾದ ರಹಸ್ಯ

2018 ರಲ್ಲಿ ಬಾಲಿವುಡ್ ನ ಬಿಗ್ಗೆಸ್ಟ್ ಬ್ಲ್ಯಾಕ್ ಬಸ್ಟರ್ ಹಿಟ್ ಸಿನಿಮಾಗಳಲ್ಲೊಂದು ಪದ್ಮಾವತ್. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಸಿನಿಮಾದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದರು.

ಸಿನಿಮಾ ಚಿತ್ರೀಕರಣ ಹಂತದಿಂದ ಬಿಡುಗಡೆಯವರೆಗೂ ಸಾಕಷ್ಟು ವಿಘ್ನಗಳು ಎದುರಾದ್ರೂ ಬಿಡುಗಡೆಯಾದ ನಂತರ ಅದೆಲ್ಲವನ್ನೂ ಮೀರಿದ ಯಶಸ್ಸು ಇಡೀ ಚಿತ್ರ ತಂಡಕ್ಕೆ ಸಿಕ್ಕಿತ್ತು. ಎಲ್ಲವೂ ಅಂದುಕೊಂಡ ಹಾಗೆ ಆಗಿದ್ದರೆ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆಯವರ ಜಾಗದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ನಟಿಸಬೇಕಿತ್ತಂತೆ.

ಪದ್ಮಾವತಿ ಪಾತ್ರಕ್ಕಾಗಿ ಸಂಜಯ್ ಲೀಲಾ ಬನ್ಸಾಲಿ ಮೊದಲು ಆಫರ್ ಕೊಟ್ಟಿದ್ದು ನಟಿ ಐಶ್ವರ್ಯ ರೈ ಬಚ್ಚನ್ ಅವರಿಗಂತೆ. ಆದ್ರೆ ಖಿಲ್ಜಿಯಾಗಿ ತನ್ನ ಎದುರು ಸಮರ್ಥವಾಗಿ ನಟಿಸುವವರಿಲ್ಲ ಅನ್ನೋ ಕಾರಣಕ್ಕೆ ಐಶ್ವರ್ಯ ರೈ ಈ ಚಿತ್ರವನ್ನು ಒಪ್ಪಿಕೊಳ್ಳಲಿಲ್ಲವಂತೆ. ಆದ್ರೆ ಪದ್ಮಾವತ್ ಸಿನಿಮಾ ನೋಡಿದ ನಂತರ ಐಶ್ವರ್ಯಗೆ ಗಿಲ್ಟ್ ಫೀಲ್ ಆಗಿದೆಯಂತೆ.

ಇಷ್ಟೇ ಅಲ್ಲ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ಸಲ್ಮಾನ್ ಮತ್ತು ಐಶ್ವರ್ಯ ಲೀಡ್ ರೋಲ್ ನಲ್ಲಿ ಅಭಿನಯಿಸಬೇಕಿತ್ತು. ಆ ಅವಕಾಶವನ್ನೂ ಕಾರಣಾಂತರಗಳಿಂದ ಐಶ್ವರ್ಯ ರೈ ಮಿಸ್ ಮಾಡಿಕೊಂಡರಂತೆ.

ಈ ಹಿಂದೆ ಹಮ್ ದಿಲ್ ದೇ ಚುಕೆ ಸನಮ್ ಮತ್ತು ದೇವ್ ದಾಸ್ ಚಿತ್ರಗಳಲ್ಲಿ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ನೊಂದಿಗೆ ಐಶ್ವರ್ಯ ರೈ ಅಭಿನಯಿಸಿದ್ದಾರೆ. ಹಾಗಿದ್ದರು ಇತ್ತೀಚಿನ ದಿನಗಳಲ್ಲಿ ಅವರೊಂದಿಗೆ ಅಭಿನಯಿಸೋಕೆ ಕಾಲ ಕೂಡಿ ಬರ್ತಿಲ್ಲ ಅಂತಿದ್ದಾರೆ ಬಿಗ್ ಬಿ ಮನೆಯ ಸೊಸೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...