alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆ ತಾಯಿ ಪಾತ್ರದಲ್ಲಿ ಐಶ್ವರ್ಯ ರೈ ಬಚ್ಚನ್

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಗೆ ವರ್ಷಾರಂಭ ಅದೃಷ್ಟ ತಂದುಕೊಟ್ಟಿದೆ ಎಂದ್ರೆ ತಪ್ಪಾಗಲ್ಲ. ಈ ಹಿಂದೆ ‘ರಾತ್ ಔರ್ ದಿನ್’ ರಿಮೇಕ್ ಗಾಗಿ  ಐಶ್ವರ್ಯ 10 ಕೋಟಿ ರೂಪಾಯಿ ಪಡೆದಿರುವ ಬಗ್ಗೆ ಸುದ್ದಿಯಾಗಿತ್ತು. ಈಗ ಐಶ್ ತೆಕ್ಕೆಗೆ ಇನ್ನೊಂದು ಚಿತ್ರ ಸೇರಿದೆ.

‘ಜಾಸ್ಮಿನ್’ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ನಟಿಸಲಿದ್ದಾರಂತೆ. ಈ ಚಿತ್ರದಲ್ಲಿ ಬಾಡಿಗೆ ತಾಯಿ ಪಾತ್ರದಲ್ಲಿ ಐಶ್ ಕಾಣಿಸಿಕೊಳ್ಳಲಿದ್ದಾಳೆ. ಇದು ನೈಜ ಕಥೆ ಆಧಾರಿತ ಎನ್ನಲಾಗಿದೆ. ಹಿಂದಿನ ವರ್ಷ ಈ ಚಿತ್ರಕ್ಕಾಗಿ ಅನುಷ್ಕಾ ಶರ್ಮಾ ಜೊತೆ ಮಾತುಕತೆ ನಡೆದಿತ್ತು. ಆದ್ರೆ ಇದು ಯಶಸ್ವಿಯಾಗಿರಲಿಲ್ಲ.

ಗುಜರಾತ್ ಮಹಿಳೆಯೊಬ್ಬಳ ಕಥೆಯನ್ನು ಜಾಸ್ಮಿನ್ ರೂಪದಲ್ಲಿ ತೆರೆ ಮೇಲೆ ತೋರಿಸಲಾಗ್ತಿದೆಯಂತೆ. ಮಗು ಹೆರಲು ಇಷ್ಟವಿರದ ಮಹಿಳೆಯೊಬ್ಬಳು ನಂತ್ರ ಬಾಡಿಗೆ ತಾಯಿಯಾಗ್ತಾಳಂತೆ. ಮಗು ಹುಟ್ಟಿದ ನಂತ್ರ ಮಗು ಮೇಲೆ ಮಹಿಳೆಗೆ ಪ್ರೀತಿ ಹೆಚ್ಚಾಗಿ ತಾನು ಹೆತ್ತ ಮಗುವನ್ನು ವಾಪಸ್ ಪಡೆಯಲು ಪ್ರಯತ್ನಿಸುತ್ತಾಳಂತೆ. ಈ ಕಥೆಗೆ ಐಶ್ ಹೊಂದುತ್ತಾರೆಂದು ನಿರ್ಮಾಪಕರು ಅಭಿಪ್ರಾಯಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...