alex Certify
ಕನ್ನಡ ದುನಿಯಾ       Mobile App
       

Kannada Duniya

ಹೆರಿಗೆ ನಂತ್ರ ಇದನ್ನು ಕದ್ದುಮುಚ್ಚಿ ಆರ್ಡರ್ ಮಾಡ್ತಾಳೆ ಐಶ್..!

ಬಾಲಿವುಡ್ ಬೆಡಗಿ ಐಶ್ವರ್ಯ ರೈ ಬಚ್ಚನ್ ಗೆ 44 ವರ್ಷವಾಯ್ತು ಎಂದ್ರೆ ನಂಬೋದು ಕಷ್ಟ. ಈಗಷ್ಟೇ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಯುವ ನಟಿಯರನ್ನೂ ನಾಚಿಸುವಂತಿದೆ ಐಶ್ ಸೌಂದರ್ಯ. ಸದ್ಯ ಫನ್ನಿಖಾನ್ ನಲ್ಲಿ ನಟಿಸುತ್ತಿರುವ ಐಶ್ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾಳೆ.

ತನಗಿಂತ 13 ವರ್ಷ ದೊಡ್ಡ ನಟರ ಜೊತೆ ಹಾಗೂ ತನಗಿಂತ 10 ವರ್ಷ ಚಿಕ್ಕ ವಯಸ್ಸಿನ ನಟರ ಜೊತೆ ನಟಿಸಿದ್ದಾಳೆ ಐಶ್. ಫನ್ನಿಖಾನ್ ನಲ್ಲಿ ತನಗಿಂತ 3 ವರ್ಷ ಚಿಕ್ಕ ವಯಸ್ಸಿನ ರಾಜ್ ಕುಮಾರ್ ರಾವ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾಳೆ.

ಹೆರಿಗೆ ನಂತ್ರ ತೂಕ ಏರೋದು ಮಾಮೂಲಿ. ಬಾಲಿವುಡ್ ನಟಿಯರಿಂದ ಹಿಡಿದು ಶ್ರೀಸಾಮಾನ್ಯರವೆರೆಗೆ ಎಲ್ಲ ಮಹಿಳೆಯರೂ ಹೆರಿಗೆ ನಂತ್ರ ದಪ್ಪಗಾಗ್ತಾರೆ. ಐಶ್ ಕೂಡ ಹೆರಿಗೆ ವೇಳೆ ದಪ್ಪಗಾಗಿದ್ದಳು. ಆರಾಧ್ಯ ಬಂದ ನಂತ್ರ ಐಶ್ ಎರಡು ಚಿತ್ರಗಳಲ್ಲಿ ನಟಿಸಿದ್ದಾಳೆ. ಈಗ ಫನ್ನಿಖಾನ್ ಶೂಟಿಂಗ್ ನಡೆಯುತ್ತಿದೆ.

ಫನ್ನಿಖಾನ್ ಪಾತ್ರಕ್ಕೆ ಐಶ್ ತೆಳ್ಳಗಾಗಬೇಕಿತ್ತಂತೆ. ಮಾಧ್ಯಮಗಳ ವರದಿ ಪ್ರಕಾರ ತೂಕ ಇಳಿಸಿಕೊಳ್ಳಲು ಐಶ್ ತೈಲವೊಂದನ್ನು ಬಳಸುತ್ತಿದ್ದಾಳೆ ಎನ್ನಲಾಗಿದೆ. ಕೆಲ ವರ್ಷಗಳಿಂದ ಐಶ್ ಆಯರ್ವೇದದ ಸ್ಲಿಮ್ ಆಯಿಲ್ ಬಳಸುತ್ತಿದ್ದಾಳೆ ಎನ್ನಲಾಗಿದೆ. ಕೇರಳದಿಂದ ಈ ಆಯಿಲ್ ತರಿಸಿಕೊಳ್ಳುತ್ತಿದ್ದಾಳೆ ಎಂಬ ಮಾಹಿತಿಯೂ ಇದೆ.

ಗರ್ಭಧಾರಣೆ ನಂತ್ರ ಐಶ್ ಈ ತೈಲ ಬಳಸುತ್ತಿದ್ದಾಳೆ. ಕೇರಳದ ಕೃಷಿ ಭೂಮಿಯಲ್ಲಿ ಈ ತೈಲ ತಯಾರಿಸಲಾಗುತ್ತಿದ್ದು, ಇದಕ್ಕಾಗಿ ಬಚ್ಚನ್ ಕುಟುಂಬ ಬಹಳಷ್ಟು ಹಣ ಖರ್ಚು ಮಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...