alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರದಲ್ಲಿ ಐಶ್ವರ್ಯಾ ರೈ ಯಾರೆಂದು ಗುರುತಿಸಬಲ್ಲಿರಾ?

ಕೆಲ ವಾರಗಳ ಹಿಂದಷ್ಟೇ ಇನ್ಸ್ಟಾಗ್ರಾಂ ಖಾತೆ ತೆರೆದಿರುವ ನಟಿ ಐಶ್ವರ್ಯ ರೈ, ಇದೀಗ ಫೋಟೋಗಳನ್ನ ಅಪ್ ಡೇಟ್ ಮಾಡುವಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಕೇನ್ಸ್ ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ವಿಭಿನ್ನ ಉಡುಗೆ ತೊಟ್ಟು ಹೆಜ್ಜೆ ಹಾಕಿದ ಫೋಟೋಗಳು, ಜೊತೆಗೆ ತಮ್ಮ ಪುತ್ರಿ ಆರಾಧ್ಯ ಫೋಟೋಗಳನ್ನು ಹಾಕಿದ್ರು. ಇದೀಗ ಐಶ್ ತಮ್ಮ ಬಾಲ್ಯದ ಫೋಟೋಗಳನ್ನು ಹಾಕಿ ಅಭಿಮಾನಿಗಳಿಗೊಂದು ಟಾಸ್ಕ್ ಕೊಟ್ಟಿದ್ದಾರೆ.

ಮಾಜಿ ಸುಂದರಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ. ಫೋಟೋಗಳನ್ನು ಅಪ್ ಡೇಟ್ ಮಾಡಿ ಇದರಲ್ಲಿ ತಮ್ಮನ್ನ ಹುಡುಕುವಂತೆ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆದ್ರೆ ಆ ಫೋಟೋದಲ್ಲಿ ತಾವೆಲ್ಲಿರುವುದು ಎಂಬ ಸುಳಿವವನ್ನು ಬಿಟ್ಟುಕೊಟ್ಟಿಲ್ಲ. ಸಧ್ಯ ಅಭಿಮಾನಿಗಳೆಲ್ಲಾ ಫೋಟೋದಲ್ಲಿ ಐಶ್ವರ್ಯಾರನ್ನು ಗುರುತಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.

ಎಲ್.ಕೆ.ಜಿ. ಫೋಟೋದಲ್ಲಿ ಐಶ್ ಕೊನೆಯ ಸಾಲಿನಲ್ಲಿ ಬಲಗಡೆಯಿಂದ ಆರನೆಯವರು ಎಂದು ಗುರುತಿಸಲಾಗಿದೆ. ಇನ್ನು ಯು.ಕೆ.ಜಿ. ಫೋಟೋದಲ್ಲಿ ಟೀಚರ್ ಬಲಕ್ಕೆ ಕೂತಿರುವುದೇ ಐಶ್ವರ್ಯ ಅಂತಾ ಗುರುತಿಸಿದ್ದಾರೆ. ಚಿಕ್ಕಂದಿನಲ್ಲಿ ಐಶ್ವರ್ಯ, ತಮ್ಮ ಪುತ್ರಿ ಆರಾಧ್ಯಳಂತೆ ಕಾಣ್ತಿದ್ದಾರೆ. ಒಟ್ನಲ್ಲಿ ಇನ್ಸ್ಟಾಗ್ರಾಂ ಖಾತೆ ತೆರೆದ ಮೇಲೆ ತಮ್ಮ ಬಾಲ್ಯದ ಫೋಟೋವನ್ನ ಐಶ್ ಅಭಿಮಾನಿಗಳಿಗೆ ತೋರಿಸಿದ್ದಾರೆ.

A post shared by AishwaryaRaiBachchan (@aishwaryaraibachchan_arb) on

💖Grade 1…the same age as Aaradhya 😍💖

A post shared by AishwaryaRaiBachchan (@aishwaryaraibachchan_arb) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...