alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಸ್ಮೆಟಿಕ್ ಸರ್ಜರಿ ಬಗ್ಗೆ ಐಶ್ ಹೇಳಿದ್ದೇನು?

ಕರಣ್ ಜೋಹರ್ ಶೋನಲ್ಲಿ ಇಮ್ರಾನ್ ಹಶ್ಮಿ, ಐಶ್ವರ್ಯ ರೈ ಬಚ್ಚನ್ ರನ್ನು ಪ್ಲಾಸ್ಟಿಕ್ ಎಂದು ಕರೆದಿದ್ದರು. ಇದನ್ನು ಕೇಳಿ ಎಲ್ಲರೂ ಆಶ್ಚರ್ಯಗೊಂಡಿದ್ದರು. ಐಶ್ವರ್ಯ ರೈ ಬಚ್ಚನ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆಂಬ ಸುದ್ದಿ ಹರಿದಾಡ್ತಾಯಿತ್ತು. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಐಶ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬುದು ಸಾಕಷ್ಟು ಬಾರಿ ಚರ್ಚೆಯಾಗಿದೆ. ಆದ್ರೆ ಅದ್ರ ಬಗ್ಗೆ ಈವರೆಗೂ ಐಶ್ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ಕಾಸ್ಮೆಟಿಕ್ ಸರ್ಜರಿ ಬಗ್ಗೆ ಐಶ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಕಾಸ್ಮೆಟಿಕ್ ಸರ್ಜರಿ ಬಗ್ಗೆ ಮಾತನಾಡಿದ ಐಶ್, ಇದ್ರಲ್ಲಿ ಮುಚ್ಚಿಡುವ ಸಂಗತಿಯೇನಿಲ್ಲ. ಇದು ನಮ್ಮಿಷ್ಟ ಎಂದಿದ್ದಾರೆ. ಹಾಗೆ ಕೂದಲಿಗೆ ಬಣ್ಣ ಹಚ್ಚಿಕೊಳ್ಳುವ ಸಂಗತಿ ಬಗ್ಗೆಯೂ ಐಶ್ ಹೇಳಿದ್ದಾರೆ. 20 ವರ್ಷಗಳ ಹಿಂದೆ ಕೂದಲಿಗೆ ಬಣ್ಣ ಹಚ್ಚುವ ಬಗ್ಗೆ ಆಲೋಚನೆ ಮಾಡಿರಲಿಲ್ಲ. ಆಗ ನನ್ನ ಕೂದಲು ಕಂದು ಬಣ್ಣದ್ದಾಗಿದ್ದರಿಂದ ಸೌಂದರ್ಯವನ್ನು ಇಮ್ಮಡಿಗೊಳಿಸ್ತಿತ್ತು. ಆದ್ರೆ ಹೇರ್ ಕಲರ್ ಬ್ರ್ಯಾಂಡ್ ಒಂದರ ಜಾಹೀರಾತಿನ ನಂತ್ರ ನಾನು ಕೂದಲಿಗೆ ಬಣ್ಣ ಬಳಿದುಕೊಳ್ಳಲು ಶುರು ಮಾಡಿದ್ದೇನೆಂದು ಐಶ್ ಹೇಳಿದ್ದಾರೆ.

ಡಯೆಟ್ ಅನುಸರಿಸುವುದಿಲ್ಲ ಎಂದ ಐಶ್, ಅಗತ್ಯವಿರುವವರು ಇದನ್ನು ಪಾಲನೆ ಮಾಡ್ತಾರೆ. ಸರಿಯಾಗಿ ತಿಳಿದುಕೊಂಡು ಡಯಟ್ ಮಾಡುವುದು ಬೆಸ್ಟ್. ಈ ಬಗ್ಗೆ ಹೆಚ್ಚಿನ ಸಲಹೆ ನೀಡಲಾರೆ ಎಂದು ಐಶ್ ಹೇಳಿದ್ದಾರೆ. ದೊಡ್ಡ ಬ್ಯಾನರ್ ಹುಚ್ಚು ನನಗಿಲ್ಲ. ಸಿಗುವ ಒಳ್ಳೆ ಅವಕಾಶಗಳನ್ನು ಬಳಸಿಕೊಳ್ತೇನೆ. ನಾನೇನು ಮಾಡ್ತಿದ್ದೇನೋ ಅದ್ರಲ್ಲಿ ಸಂತೋಷವಿದೆ ಎಂದು ಐಶ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...