alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಂಪು ಸಾರಿಯಲ್ಲಿ ದೇವತೆಯಂತೆ ಮಿಂಚಿದ ಐಶ್

ಮುಂಬೈನಲ್ಲಿ ಗಣೇಶ ವಿಸರ್ಜನೆ ಸಂಭ್ರಮ ಮನೆ ಮಾಡಿದೆ. ಬಾಲಿವುಡ್ ಗೆ ಬಾಲಿವುಡ್ ಗಣೇಶನ ಆರಾಧನೆಯಲ್ಲಿ ನಿರತವಾಗಿದೆ. ಬಾಲಿವುಡ್ ಬಿಗ್ ಬಿ ಸೊಸೆ, ನಟಿ ಐಶ್ವರ್ಯ ರೈ ಬಚ್ಚನ್ ವಿಘ್ನ ವಿನಾಶಕನ ಆರಾಧನೆಯಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿ ವರ್ಷದಂತೆಯೇ ಈ ವರ್ಷವೂ ಐಶ್ವರ್ಯ ರೈ ಬಚ್ಚನ್ ಲಾಲ್ ಬಾಗ್ ಕೆ ರಾಜಾ ( ಲಾಲ್ ಬಾಗ್ಜಾ ರಾಜಾ)ನ ಆಶೀರ್ವಾದ ಪಡೆದ್ರು.

ಗಣಪತಿ ದರ್ಶನಕ್ಕೆ ಬಂದ ಐಶ್ ನೋಡಲು ಎರಡು ಕಣ್ಣು ಸಾಲ್ತಿರಲಿಲ್ಲ. ಕೆಂಪು ಸಾರಿಯಲ್ಲಿ ದೇವತೆಯಂತೆ ಮಿಂಚುತ್ತಿದ್ದರು ಐಶ್. ಸೋಮವಾರ ರಾತ್ರಿ ಐಶ್ವರ್ಯ ರೈ ಬಚ್ಚನ್ ಲಾಲ್ ಬಾಗ್ ಕೆ ರಾಜಾನ ದರ್ಶನಕ್ಕೆ ಬಂದಿದ್ದರು. ಐಶ್ವರ್ಯ ರೈ ಜೊತೆ ಅಭಿಷೇಕ್ ಬಚ್ಚನ್ ಕೂಡ ಬಪ್ಪನ ದರ್ಶನ ಪಡೆದ್ರು. ಆದ್ರೆ ಆರಾಧ್ಯ ಜೊತೆಗಿರಲಿಲ್ಲ. ಆಗಸ್ಟ್ 27ರಂದು ಆರಾಧ್ಯ ಅಮ್ಮ ಐಶ್ ಜೊತೆ ಗಣೇಶನ ದರ್ಶನ ಮಾಡಿದ್ದಳು. ಆದ್ರೆ ಅಭಿಷೇಕ್ ಬಂದಿರಲಿಲ್ಲ. ಈಗ ಪತಿ-ಪತ್ನಿ ಒಟ್ಟಿಗೆ ಬಂದು ದರ್ಶನ ಪಡೆದಿದ್ದಾರೆ.

ಐಶ್ವರ್ಯ ರೈ ಬಚ್ಚನ್ ಸದ್ಯ ಫ್ಯಾನಿ ಖಾನ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅನಿಲ್ ಕಪೂರ್ ಜೊತೆ ಐಶ್ ಮತ್ತೊಮ್ಮೆ ದೊಡ್ಡ ಪರದೆ ಮೇಲೆ ಮಿಂಚಲಿದ್ದು, ಚಿತ್ರದ ಶೂಟಿಂಗ್ ಶುರುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...