alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಾಪ್ ಹೀರೋ ಅಭಿಷೇಕ್ ಯಶಸ್ಸಿಗೆ ಐಶೂ ಹೊಸ ಪ್ಲಾನ್

ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮಗನಾದ್ರೂ ಅಭಿಷೇಕ್ ಬಚ್ಚನ್ ಬಾಲಿವುಡ್ ನ ಸ್ಟಾರ್ ನಟ ಎನಿಸಿಕೊಂಡಿಲ್ಲ. ಅಪರೂಪಕ್ಕೆ ಒಂದೆರಡು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ ಬಿಟ್ರೆ, ಅಭಿಷೇಕ್ ಮಾಡಿರೋ ಬಹುತೇಕ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ತೋಪೆದ್ದಿವೆ.

‘ಹೌಸ್ ಫುಲ್-3’ ನಂತರ ಅಭಿಷೇಕ್ ಯಾವ ಚಿತ್ರದಲ್ಲೂ ನಟಿಸಿಲ್ಲ. ಅಂತಹ ಮಹಾನ್ ನಟನ ಪುತ್ರನಾದ್ರೂ ಅಭಿಷೇಕ್ ಸಿನಿ ಪಯಣ ಸಪ್ಪೆಯಾಗಿದಂತೂ ಸುಳ್ಳಲ್ಲ. ಆದ್ರೆ ಸದ್ಯದಲ್ಲೇ ಈ ಫ್ಲಾಪ್ ಹೀರೋ ಕೂಡ ಯಶಸ್ಸಿನ ಹಳಿಯೇರಲಿದ್ದಾರೆ.

ಅದಕ್ಕೆ ಕಾರಣ ಯಾರು ಗೊತ್ತಾ? ನಟ ಸಲ್ಮಾನ್ ಖಾನ್ ಅವರ ಮಾಜಿ ಮ್ಯಾನೇಜರ್ ರೇಷ್ಮಾ ಶೆಟ್ಟಿ. ಅಭಿಷೇಕ್ ಬಚ್ಚನ್ ರ ಪ್ರಾಜೆಕ್ಟ್ ಗಳನ್ನೆಲ್ಲ ಇನ್ಮೇಲೆ ರೇಷ್ಮಾ ಮ್ಯಾನೇಜ್ ಮಾಡಲಿದ್ದಾರೆ. ರೇಷ್ಮಾರನ್ನು ಮ್ಯಾನೇಜರ್ ಆಗಿ ನೇಮಿಸುವ ಐಡಿಯಾ ಮತ್ಯಾರದ್ದೂ ಅಲ್ಲ, ಪತ್ನಿ ಐಶ್ವರ್ಯಾ ರೈ ಬಚ್ಚನ್ ದು.

ಸಲ್ಮಾನ್ ಖಾನ್ ಸಾಕಷ್ಟು ಹಗರಣಗಳಲ್ಲಿ ಸಿಲುಕಿಕೊಂಡಿದ್ರು. ಆ ಇಮೇಜ್ ಬದಲಾಯಿಸಿದ್ದು ಕೂಡ ರೇಷ್ಮಾ. ಅಷ್ಟೇ ಅಲ್ಲ ಸಿನೆಮಾಗಳ ಆಯ್ಕೆಯಲ್ಲೂ ಸಲ್ಲುಗೆ ಸಾಥ್ ನೀಡಿದ್ದರು. ಆದ್ರೆ ಸಲ್ಮಾನ್ ಸಹೋದರ ಸೊಹೈಲ್ ಖಾನ್ ಜೊತೆಗಿನ ಕಿತ್ತಾಟದ ಬಳಿಕ ಮ್ಯಾನೇಜರ್ ಹುದ್ದೆ ತ್ಯಜಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...