alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಜಯ್ ದತ್ ತಾಯಿ ಪಾತ್ರದಲ್ಲಿ ಐಶ್ವರ್ಯ

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಸಿಕ್ಕಾಪಟ್ಟೆ ಬ್ಯುಸಿ. ಸದ್ಯ ಪತಿ ಅಭಿಷೇಕ್ ಬಚ್ಚನ್ ಜೊತೆ ಐಶ್ ಗುಲಾಬ್ ಜಾಮೂನ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಈ ವಿಷ್ಯವನ್ನು ಸ್ಪಷ್ಟಪಡಿಸಿರುವ ಐಶ್ವರ್ಯ ರೈ ಬಚ್ಚನ್ ಕೈನಲ್ಲಿರುವ ಇನ್ನೂ ಕೆಲ ಸಿನಿಮಾಗಳ ಬಗ್ಗೆ ಮಾತನಾಡಿದ್ದಾಳೆ.

ಐಶ್ ರಾತ್ ಔರ್ ದಿನ್ ಚಿತ್ರದಲ್ಲಿ ನಟಿಸಲಿದ್ದಾಳಂತೆ. ಸಂಜಯ್ ದತ್ ತಾಯಿ ನರ್ಗೀಸ್ ನಟಿಸಿದ್ದ ಪಾತ್ರಕ್ಕೆ ಜೀವ ತುಂಬಲಿದ್ದಾಳಂತೆ. 2005 ರಲ್ಲಿ ಶಬ್ಧ್ ಚಿತ್ರದಲ್ಲಿ ಸಂಜಯ್ ದತ್, ಐಶ್ವರ್ಯ ಒಟ್ಟಿಗೆ ನಟಿಸಿದ್ದರು. ಆಗ್ಲೇ ಸಂಜಯ್ ದಿನ್ ಔರ್ ರಾತ್ ಬಗ್ಗೆ ಮಾತನಾಡಿದ್ದರಂತೆ. ಒಂದು ವೇಳೆ ದಿನ್ ಔರ್ ರಾತ್ ಚಿತ್ರ ಮತ್ತೆ ಬಂದ್ರೆ ಅಮ್ಮನ ಪಾತ್ರದಲ್ಲಿ ನೀನು ನಟಿಸಬೇಕು ಎಂದಿದ್ದರಂತೆ. ನನ್ನ ಮೇಲೆ ಸಂಜು ತುಂಬಾ ವಿಶ್ವಾಸವಿಟ್ಟಿದ್ದಾರೆ ಎಂದು ಐಶ್ವರ್ಯ ಹೇಳಿದ್ದಾಳೆ.

ಇದಲ್ಲದೆ ಬಾಡಿಗೆ ತಾಯಿ ಕಥೆಯಾಧಾರಿತ ಚಿತ್ರವೊಂದರಲ್ಲೂ ಐಶ್ವರ್ಯ ನಟಿಸಲಿದ್ದಾರಂತೆ. ವೋ ಕೌನ್ ತಿ ಚಿತ್ರದಲ್ಲಿ ಶಾಹಿದ್ ಕಪೂರ್ ಸಂಗಾತಿಯಾಗಿ ನಟಿಸುವ ಸಾಧ್ಯತೆ ಹೆಚ್ಚಿದೆಯಂತೆ. ಎರಡೂ ಚಿತ್ರಗಳು ತುಂಬಾ ಆಸಕ್ತಿದಾಯಕವಾಗಿದ್ದು, ಈ ಚಿತ್ರಗಳಲ್ಲಿ ನಟಿಸಲು ಉತ್ಸುಕಳಾಗಿದ್ದೇನೆಂದು ಐಶ್ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...