alex Certify
ಕನ್ನಡ ದುನಿಯಾ       Mobile App
       

Kannada Duniya

ಐಶ್ ಮಗಳ ಸ್ನೇಹದಿಂದ ಅಮೀರ್ ಮಗನ ಸ್ಥಿತಿ ಹೀಗಾಯ್ತು…

aaradhya-azad

ಬಾಲಿವುಡ್ ಸ್ಟಾರ್ ಗಳು ಉತ್ತಮ ಸ್ನೇಹಿತರಾಗಿರ್ತಾರೆ. ಸಭೆ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸುವ ಅವರು ಕೆಲವೊಮ್ಮೆ ಮನೆಗೆ ಹೋಗಿ ಬರ್ತಾರೆ. ಇದೇ ಕಾರಣಕ್ಕೇ ಏನೂ ಅವರ ಮಕ್ಕಳೂ ಗೆಳೆಯರಾಗಿಬಿಡ್ತಾರೆ. ಈ ಪಟ್ಟಿಯಲ್ಲಿ ಐಶ್ವರ್ಯ ರೈ ಬಚ್ಚನ್ ಮಗಳು ಆರಾಧ್ಯ ಹಾಗೂ ಅಮೀರ್ ಖಾನ್ ಮಗ ಆಜಾದ್ ಕೂಡ ಇದ್ದಾರೆ.

ಆರಾಧ್ಯ ಹಾಗೂ ಆಜಾದ್ ಇಬ್ಬರು ಬೆಸ್ಟ್ ಫ್ರೆಂಡ್ಸ್. ಆದ್ರೆ ಸದ್ಯ ಆಜಾದ್ ಬೇಸರದಲ್ಲಿದ್ದಾನೆ. ಆರಾಧ್ಯಳನ್ನು ಮಿಸ್ ಮಾಡಿಕೊಳ್ತಿದ್ದಾನೆ. ಇದಕ್ಕೆ ಕಾರಣ ಆರಾಧ್ಯ ಊರಿನಲ್ಲಿರದೆಯಿರೋದು. ಆರಾಧ್ಯ ನ್ಯೂಯಾರ್ಕ್ ನಲ್ಲಿ ಅಮ್ಮನ ಜೊತೆ ರಜಾದ ಮಜಾ ಸವಿಯುತ್ತಿದ್ದಾಳೆ. ಇದು ಆಜಾದ್ ಒಂಟಿಯಾಗುವಂತೆ ಮಾಡಿದೆ.

ಇತ್ತೀಚೆಗೆ ನಡೆದ ಕಬಡ್ಡಿ ಪಂದ್ಯವೊಂದಕ್ಕೆ ಆಜಾದ್, ಅಮ್ಮ ಕಿರಣ್ ರಾವ್ ಜೊತೆ ಬಂದಿದ್ದ. ಅಲ್ಲಿ ಆರಾಧ್ಯಳನ್ನು ಹುಡುಕಿದ್ದಾನೆ. ಪದೇ ಪದೇ ಅಮ್ಮನ ಬಳಿ ಬಂದು ಆರಾಧ್ಯ ಎಲ್ಲಿ ಎಂದು ಕೇಳಿದ್ದಾನೆ. ಆತನನ್ನು ಸುಮ್ಮನಿರಿಸಲು ಹಾಗೂ ಆತ ಖುಷಿಯಾಗಿರುವಂತೆ ನೋಡಿಕೊಳ್ಳುವ ಹೊಣೆಯನ್ನು ಆರಾಧ್ಯ ಅಜ್ಜ ಅಮಿತಾಬ್ ಬಚ್ಚನ್ ಹೊತ್ತುಕೊಂಡಿದ್ದರು. ರಣಬೀರ್ ಕಪೂರ್ ಕೂಡ ಬಚ್ಚನ್ ಗೆ ಸಾಥ್ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...