alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಭ್ ಮನೆಯಲ್ಲಿ ಹೀಗಿತ್ತು ಹೋಳಿ ಸಡಗರ

ಬಣ್ಣಗಳ ಹಬ್ಬ ಹೋಳಿಯನ್ನು ಎಲ್ಲೆಡೆ ಸಡಗರದಿಂದ ಆಚರಿಸಲಾಗ್ತಿದೆ. ನಿನ್ನೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮನೆಯಲ್ಲೂ ಹೋಳಿ ಹಬ್ಬದ ನಿಮಿತ್ತ ಪೂಜೆ ನಡೆದಿದೆ. ಬಚ್ಚನ್ ಕುಟುಂಬದವರೆಲ್ಲ ಒಟ್ಟಾಗಿ ಸೇರಿ ಹಬ್ಬ ಆಚರಿಸಿದ್ದು ವಿಶೇಷ.

ಕಾಮದಹನದ ಫೋಟೋಗಳನ್ನು ಅಮಿತಾಭ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಪೂಜೆ ಬಳಿಕ ಅಮಿತಾಭ್ ಮೊಮ್ಮಗಳು ಆರಾಧ್ಯ, ಸೊಸೆ ಐಶ್ವರ್ಯಾ ಹಾಗೂ ಮಗಳು ಶ್ವೇತಾಗೆ ತಿಲಕ ಇಟ್ಟು ಆಶೀರ್ವಾದ ಮಾಡಿದ್ದಾರೆ. ಪೂಜೆ ಬಳಿಕ ಎಲ್ಲರೂ ಗುಜಿಯಾ ಸವಿದಿದ್ದಾರೆ.

ಜಯಾ ಬಚ್ಚನ್ ತಮ್ಮ ಪತಿಗೆ ತಿಲಕ ಇಡುವ ಮೂಲಕ ಹೋಳಿ ಆಚರಿಸಿದ್ರು. ಐಶ್ವರ್ಯಾ ರೈ ತಂದೆಯ ನಿಧನದ ಹಿನ್ನೆಲೆಯಲ್ಲಿ ಬಚ್ಚನ್ ಕುಟುಂಬದವರು ಬಣ್ಣದೋಕುಳಿ ಆಡುತ್ತಿಲ್ಲ. ಇನ್ನು ‘ಮನ್ ಮರ್ಜಿಯಾ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಕಾರಣ ಅಭಿಷೇಕ್ ಬಚ್ಚನ್ ಪೂಜೆಯಲ್ಲಿ ಪಾಲ್ಗೊಂಡಿರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...