alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೆಷಲ್ ಪಾರ್ಟಿ ಹಾಡಿಗೆ ಸೊಂಟ ಬಳುಕಿಸ್ತಿದ್ದಾರೆ ಐಂದ್ರಿತಾ

ಐಂದ್ರಿತಾ ಕನ್ನಡದಲ್ಲಿ ಸಾಕಷ್ಟು ಹೆಸರು ಮಾಡಿರೋ ನಟಿ. ಐಂದ್ರಿತಾ ನಟಿಸಿರೋ ಕೆಲವೊಂದು ಸಿನೆಮಾಗಳು ಫ್ಲಾಪ್ ಆಗಿದ್ರೂ, ಹಾಡುಗಳಂತೂ ಸೂಪರ್ ಹಿಟ್ ಆಗುತ್ತವೆ. ಅದರಲ್ಲೂ ಐಂದ್ರಿತಾಳ ಸ್ಪೆಷಲ್ ಡಾನ್ಸ್ ನಂಬರ್ ಆಗಿದ್ರೆ ಪ್ರೇಕ್ಷಕರಿಗೆ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ.

ಪ್ರೇಮ್ ಅಡ್ಡಾದ ಬಸಂತಿ, ಕಡ್ಡಿಪುಡಿ ಚಿತ್ರದ ಸೌಂದರ್ಯ ಸಮರ ಹಾಡುಗಳನ್ನು ಜನರು ಇನ್ನೂ ಮರೆತಿಲ್ಲ. ಚಂದನ್ ಶೆಟ್ಟಿ ಜೊತೆಗಿನ 3ಪೆಗ್ ಕೂಡ ಸೂಪರ್ ಹಿಟ್ ಆಗಿದೆ. ಇದೀಗ Rambo 2 ಚಿತ್ರದ ಸ್ಪೆಷಲ್ ಹಾಡೊಂದರಲ್ಲಿ ಐಂದ್ರಿತಾ ಸೊಂಟ ಬಳುಕಿಸಲಿದ್ದಾರೆ.

ಶರಣ್ ಹಾಗೂ ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಹಾಡು ತುಂಬಾನೇ ಇಷ್ಟವಾಗಿದ್ದರಿಂದ ಡಾನ್ಸ್ ಮಾಡಲು ಒಪ್ಪಿಕೊಂಡೆ ಅಂತಾ ಐಂದ್ರಿತಾ ತಿಳಿಸಿದ್ದಾರೆ. ಶಚಿನಾ ಹೆಗ್ಗಾರ್ ಈ ಹಾಡಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಲಿದ್ದಾರೆ.

ಸಿನೆಮಾದ ಪ್ರಮುಖ ಘಟ್ಟದಲ್ಲಿರೋ ಹಾಡು ಇದು. ಸಾಮಾನ್ಯ ಐಟಂ ನಂಬರ್ ಅಲ್ಲ ಎನ್ನುತ್ತಾರೆ ಐಂದ್ರಿತಾ. ಒಂದು ರೀತಿಯ ಪಾರ್ಟಿ ಟ್ರ್ಯಾಕ್ ಅಂತಾ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...